ಶಹೀರಾಗೆ ಗೋಲ್ಡನ್ ಐಕಾನ್ ನ್ಯಾಷನಲ್ ಅವಾರ್ಡ್

ಕೂಡಗಿಯ ಸೈಕ್ಲಿಂಗ್ ಕ್ರೀಡಾಪಟು ಶಹೀರಾ ಲಾಲಸಾಬ ಸವಾರಗೋಳ ಅವರಿಗೆ ಗೋವಾದ ಪಣಜಿಯಲ್ಲಿ ಗೋಲ್ಡನ್ ಐಕಾನ್ ನ್ಯಾಷನಲ್ ಅವಾರ್ಡ್ ಅಭಿಸಿತು. ಕದಂಬ ಫೌಂಡೇಶನ್ನಿನ ಅಧ್ಯಕ್ಷ ಬಾಳೇಶ ಹರಿಜನ, ಆಲಂ ಗಣಿ  ಮತ್ತಿತರರಿದ್ದರು.
ಕೂಡಗಿಯ ಸೈಕ್ಲಿಂಗ್ ಕ್ರೀಡಾಪಟು ಶಹೀರಾ ಲಾಲಸಾಬ ಸವಾರಗೋಳ ಅವರಿಗೆ ಗೋವಾದ ಪಣಜಿಯಲ್ಲಿ ಗೋಲ್ಡನ್ ಐಕಾನ್ ನ್ಯಾಷನಲ್ ಅವಾರ್ಡ್ ಅಭಿಸಿತು. ಕದಂಬ ಫೌಂಡೇಶನ್ನಿನ ಅಧ್ಯಕ್ಷ ಬಾಳೇಶ ಹರಿಜನ, ಆಲಂ ಗಣಿ ಮತ್ತಿತರರಿದ್ದರು.
Published on
ಗೊಳಸಂಗಿ : ಕೂಡಗಿ ಗ್ರಾಮದ ಸೈಕ್ಲಿಂಗ್ ಕ್ರೀಡಾಪಟು ಶಹೀರಾ ಲಾಲಸಾಬ ಸವಾರಗೋಳ ಅವರಿಗೆ ಪ್ರತಿಷ್ಠಿತ ಗೋಲ್ಡನ್ ಐಕಾನ್ ನ್ಯಾಷನಲ್ ಅವಾರ್ಡ್ ಲಭಿಸಿದೆ.
ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ಪ್ರಯುಕ್ತ ಗೋವಾದ ಕದಂಬ ಫೌಂಡೇಶನ್ ವತಿಯಿಂದ ಗೋವಾದ ಪಣಜಿಯ ಅಶೋಕ ಪ್ಲಾಜಾ ಮಲ್ಟಿಪ್ಲೆಕ್ಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕದಂಬ ಫೌಂಡೇಶನ್ನಿನ ಅಧ್ಯಕ್ಷ ಬಾಳೇಶ ಹರಿಜನ ಅವಾರ್ಡ್ ನೀಡಿ ಗೌರವಿಸಿದರು.
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಶಹೀರಾ ಲಾಲಸಾಬ ಸವಾರಗೋಳ ರಾಷ್ಟ್ರೀಯ ಮಟ್ಟದಲ್ಲಿ ೬ ಚಿನ್ನದ ಪದಕ, ೬ ಬೆಳ್ಳಿಯ ಪದಕ, ೭ ಕಂಚಿನ ಪದಕಗಳು ಮತ್ತು ನೂರಾರು ಇತರೆ ಪದಕಗಳನ್ನು ತಮ್ಮದಾಗಿಸಿಕೊಂಡು ವಿಜಯಪುರ ಜಿಲ್ಲೆಯ ಕೀರ್ತಿ ಪತಾಕೆಯನ್ನು ದೇಶದ ಉದ್ದಗಲಕ್ಕೂ ಹಾರಿಸಿರುವುದು ವಿಶೇಷವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net