ಸಹಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ, ಪ್ರಭಾರಿ ಮುಖ್ಯಾಧ್ಯಾಪಕನ ಮೇಲೆ ದೂರು ದಾಖಲು
Sexual assault
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸೀರೆ ಜಗ್ಗುತ್ತಾನೆ-ಕೈ ಹಿಡಿದು ಎಳೆಯುತ್ತಾನೆ
ಕಲ್ಲಿನ ಹರಳು ಎಸೆಯುತ್ತಾನೆ
ಶಾಲೆಯಲ್ಲಿ ಅನುಚಿತವಾಗಿ ವರ್ತಿಸುತ್ತಾನೆ
ಮುಖ್ಯಾಧ್ಯಾಪಕನ ವಿರುದ್ಧ ಎಫ್‌ಐಆರ್ ದಾಖಲು
ವಿಜಯಪುರ: ‘ಶಾಲೆಯಲ್ಲಿ ಯಾರೂ ಇಲ್ಲದಾಗ ಕಲ್ಲಿನ ಹರಳು ಎಸೆಯುತ್ತಾನೆ, ಸೀರೆ ಜಗ್ಗುತ್ತಾನೆ-ಕೈ ಹಿಡಿದು ಎಳೆಯುತ್ತಾನೆ, ಅನುಚಿತವಾಗಿ ವರ್ತಿಸುತ್ತಾನೆ, ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾ, ಅಷ್ಟೇ ಏಕೆ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಾನೆ, ದಯವಿಟ್ಟು ನನಗೆ ನ್ಯಾಯ ಒದಗಿಸಿ, ಕಾನೂನಿನ ರಕ್ಷಣೆ ನೀಡಿ...’
ಬಬಲೇಶ್ವರ ತಾಲೂಕಿನ ಹೊಳೆಹಂಗರಗಿ ಗ್ರಾಮದ ಜಿಎಚ್‌ಪಿ ಶಾಲೆಯ ಸಹ ಶಿಕ್ಷಕಿಯೊಬ್ಬಳು ಆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯನ ವಿರುದ್ಧ ಮಾಡಿರುವ ಆರೋಪ ಮತ್ತು ಪೊಲೀಸರಿಗೆ ನೀಡಿದ ಅಧಿಕೃತ ದೂರಿನ ಸಾರಾಂಶ. ಅಂದ ಹಾಗೆ ಆ ಶಿಕ್ಷಕನ ಹೆಸರು ರವಿಕಿರಣ ಎನ್.ಪಾಟೀಲ.
ಫೆ. 5 ರಂದು ಮಧ್ಯಾಹ್ನ 1.50ರ ಸುಮಾರಿಗೆ ಊಟದ ತಯಾರಿಯಲ್ಲಿದ್ದ ಶಿಕ್ಷಕಿಯ ಸೀರೆಯ ಮೇಲೆ ಚಿಕ್ಕ ಕಲ್ಲಿನ ಹರಳೊಂದು ಬೀಳುತ್ತದೆ. ತಿರುಗಿ ನೋಡಿದರೆ ರವಿಕಿರಣ ‘ನಾ ಒಳಗೆ ಬರುತ್ತೇನೆ ಯಾರೂ ಇಲ್ಲ’ ಎನ್ನುತ್ತಿದ್ದಂತೆ ಸಹ ಶಿಕ್ಷಕಿ ಎದ್ದು ಹೊರಡುತ್ತಿದ್ದಾಗಲೇ ಬಂದು ಕೈ ಹಿಡಿದು ಎಳೆದಾಡಿದ್ದಾನೆ. ಪಸರಿಸಿಕೊಂಡು ಅವರಿಂದ ಬಿಡಿಸಿಕೊಂಡು ಚೀರಾಡುತ್ತ ಬಾಗಿಲ ಬಳಿ ಬರುವಷ್ಟರಲ್ಲಿ ನಾಲ್ಕೈದು ಮಕ್ಕಳು ಬಂದು ‘ಏನಾಯಿತು ಮೇಡಂ ಏಕೆ ಅಳುತ್ತಿದ್ದೀರಿ’ ಎಂದು ವಿಚಾರಿಸಿದರು. ಗಾಬರಿಯಿಂದ ದುಃಖ ತಡೆಯದ ಸಹ ಶಿಕ್ಷಕಿ ಕೊಲ್ಹಾರದ ತಮ್ಮ ಮನೆಗೆ ತೆರಳಿದ್ದಾರೆ.
ಮನೆಯಲ್ಲಿ ನೋವಿನಿಂದ ನರಳುತ್ತಲೇ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿ ಅವರು ಆರೋಗ್ಯದ ಸ್ಥಿತಿಗತಿ ಪರಿಶೀಲಿಸಲೆಂದು ಕೊಲ್ಹಾರದ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಅಸ್ವಸ್ಥತೆಯಿಂದಿರುವಾಗಲೇ ಪೊಲೀಸರೊಬ್ಬರು ಬಂದು ತಾವು ಬರೆದುಕೊಂಡು ಬಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಆ ಪತ್ರ ಓದುವ ಸ್ಥಿತಿಯಲ್ಲಿರದ ಸಹ ಶಿಕ್ಷಕಿ ಹೊಸದಾಗಿ ದೂರು ದಾಖಲಿಸಿದ್ದು, ಅದರಲ್ಲಿ ಮುಖ್ಯ ಶಿಕ್ಷಕನ ವರ್ತನೆ, ದೌರ್ಜನ್ಯ, ಕಿರುಕುಳಕ್ಕೆ ಸಂಬಂಧಿಸಿದಂತೆ ಎಳೆಎಳೆಯಾಗಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಬಲೇಶ್ವರ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.