ವಿಜಯಪುರದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಣವ ಪ್ರಕಾಶ ಮಹಾರಾಜರು, ಎಸ್.ಎಂ. ಗಂಗಾಣಿ ಮತ್ತಿತರರಿದ್ದಾರೆ.
Published on:
Copied
Follow Us
ವಿಜಯಪುರ : ಇಲ್ಲಿನ ಕಾಳಿಕಾ ನಗರದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಎರಡು ದಿನಗಳ ಕಾಲ ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರ ಸತ್ಸಂಗ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಶನಿವಾರ ಸಂಜೆ ಭಜನೆಯೊಂದಿಗೆ ಸತ್ಸಂಗ ಕಾರ್ಯಕ್ರಮ ಪ್ರಾರಂಭಗೊAಡಿತು. ಪರಮಪೂಜ್ಯ ಪ್ರಕಾಶ ಮಹಾರಾಜರು, ತಾರಾ ಚಂದ ಮಹಾರಾಜರು, ಎಸ್.ಎ. ಪಂಚಾಲ್ ಗುರುಗಳು, ಐಶ್ವರ್ಯ ತಾಯಿ ಮತ್ತು ವೈಷ್ಣವಿ ಅವರಿಂದ ಪ್ರವಚನ ಜರುಗಿತು. ನಂತರ ಭಜನೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಭಾನುವಾರ ಬೆಳಗ್ಗೆ 5.30 ಗಂಟೆಗೆ ಕಾಕಡಾರತಿ, 9.30 ಗಂಟೆಗೆ ಸಕಲ ವಾದ್ಯದೊಂದಿಗೆ ನಗರ ಸಂಕೀರ್ತನ, 11 ಗಂಟೆಗೆ ಸದ್ಗುರುಗಳ ಪೂಜೆ ಹಾಗೂ ಸದ್ಗುರುಗಳ ಪಾದಕಾ ಪೂಜೆ ಜರುಗಿದವು.
ನಂತರ ಶ್ರೀನಿವಾಸ ಗುರುಗಳು, ಭೀಮಾಶಂಕರ ಮಹಾರಾಜರು, ಈರಣ್ಣ ಶಾಸಿöಗಳು, ಐಶ್ವರ್ಯ ತಾಯಿ, ಪಾರ್ವತಿ ಮಾತಾ ಹಾಗೂ ಕುಮಾರಿ ವೈಷ್ಣವಿ ಅವರುಗಳಿಂದ ಪ್ರವಚನ ನಡೆಯಿತು.
ನೇತೃತ್ವ ವಹಿಸಿದ್ದ ಪ್ರಣವ ಪ್ರಕಾಶ ಮಹಾರಾಜರು ಆಶೀರ್ವಚನ ನೀಡಿದರು. ನಂತರ ಪುಷ್ಪ ವೃಷ್ಠಿ ಹಾಗೂ ಭಜನೆ ನೆರವೇರಿತು. ಸತ್ಸಂಗದಲ್ಲಿ 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಶೇ. 80 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಎಸ್.ಎಂ. ಗಂಗಾಣಿ ಕಾರ್ಯಕ್ರಮ ನಿರ್ವಹಿಸಿದರು.