ಗ್ರಾಮೀಣರ ಸಾಹಿತ್ಯ ನಮ್ಮೆಲ್ಲರ ಸಂಸ್ಕೃತಿಯ ಪ್ರತೀಕ

ವಿಜಯಪುರದ ಕಸಾಪ ಸಭಾಂಗಣದಲ್ಲಿ ತಾಲೂಕಿನ ಕಸಾಪ ಮಹಿಳಾ ಪ್ರತಿನಿಽಗಳ ಸಭೆ ನಡೆಯಿತು. ಮೊಹದ್ದೀನ ರೂಗಿ, ನೀಲಮ್ಮ ಯಡ್ರಾಮಿ, ನಂದಾ ಗುನ್ನಾಪೂರ ಮತ್ತಿತರರಿದ್ದಾರೆ.
ವಿಜಯಪುರದ ಕಸಾಪ ಸಭಾಂಗಣದಲ್ಲಿ ತಾಲೂಕಿನ ಕಸಾಪ ಮಹಿಳಾ ಪ್ರತಿನಿಽಗಳ ಸಭೆ ನಡೆಯಿತು. ಮೊಹದ್ದೀನ ರೂಗಿ, ನೀಲಮ್ಮ ಯಡ್ರಾಮಿ, ನಂದಾ ಗುನ್ನಾಪೂರ ಮತ್ತಿತರರಿದ್ದಾರೆ.
Published on
ವಿಜಯಪುರ: ಗ್ರಾಮೀಣ ಪ್ರದೇಶದ ಹಿರಿಯ ಮಹಿಳೆಯರು ಜಾನಪದ ಸಾಹಿತ್ಯದ ರೂವಾರಿಗಳಾಗಿದ್ದಾರೆ. ಗ್ರಾಮೀಣ ಮಹಿಳೆಯರ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಅವಕಾಶ ನೀಡುವಲ್ಲಿ ಕಸಾಪ ಕಾರ್ಯ ನಿರ್ವಹಿಸುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಲ್ಲ ತಾಲೂಕಿನ ಕಸಾಪ ಮಹಿಳಾ ಪ್ರತಿನಿಽಗಳ ಸಭೆಯಲ್ಲಿ ಅವರು ಮಾತನಾಡಿದರು.
ಸೋಬಾನ ಪದ, ಗೀಗಿ ಪದ, ಜೋಗುಳ ಪದ, ತೊಟ್ಟಿಲು ಪದ, ಸುರಗಿ ಪದ, ಐರಾಣಿ ಪದ, ಗುಳ್ಳವ್ವನ ಪದ, ಬಯಕೆ ಪದಗಳು ಸೇರಿ ಮುಂತಾದ ಹಾಡು ಹೇಳುವ ಹಿರಿಯ ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ದೊರಕುವುದರಿಂದ ಕಸಾಪ ಘಟಕವು ಅವರನ್ನು ಗುರುತಿಸಿ ವೇದಿಕೆ ನೀಡುತ್ತಿದೆ, ಗ್ರಾಮೀಣರ ಸಾಹಿತ್ಯ ನಮ್ಮೆಲ್ಲರ ಸಂಸ್ಕೃತಿಯ ಪ್ರತೀಕವಾಗಿದ್ದು, ತಾವು ಕಸಾಪದೊಂದಿಗೆ ಕೈ ಜೋಡಿಸುವ ಕಾರ್ಯ ಪರಿಣಾಮಕಾರಿಯಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಮೊಹದ್ದೀನ ರೂಗಿ, ಜಿಲ್ಲಾ ಮಹಿಳಾ ಪದಾಽಕಾರಿಗಳಾದ ನೀಲಮ್ಮ ಯಡ್ರಾಮಿ, ನಂದಾ ಗುನ್ನಾಪೂರ, ಶ್ರೀದೇವಿ ಕುಲಕರ್ಣಿ, ದಿಶಾ ಚಿಕನಾದ, ಅನಸೂಯಾ ಮದ್ರಿ, ಸರಸ್ವತಿ ಮಾಸ್ಯಾಳ, ಜಯಶ್ರೀ ನಾಟೀಕಾರ, ವಿದ್ಯಾ ತೆನಹಳ್ಳಿ, ಪ್ರಿಯಾಂಕಾ ಭೀಸೆ, ಶೋಭಾ ಬಿರಾದಾರ, ಶೋಭಾ ಹಂಚನಾಳ, ಲಕ್ಕಮ್ಮ ಬಿರಾದಾರ, ಜಯಶ್ರೀ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net