ರೋಜರ್ಸ್ ಅಂಡ್ ರೋವರ್ಸ್ ಕಾರ್ಯಗಾರ

ವಿಜಯಪುರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ರೋಜರ್ಸ್ ಅಂಡ್ ರೋವರ್ಸ್ ಘಟಕದ ಕಾರ್ಯಗಾರ ನಡೆಯಿತು. ಎಸ್.ಎಸ್. ಬೊಮ್ಮನಹಳ್ಳಿ, ಪಿ.ಎಸ್. ಕುಂಬಾರ, ಎಸ್.ಟಿ. ಬೋಳರಡ್ಡಿ ಮತ್ತಿತರರಿದ್ದಾರೆ.
ವಿಜಯಪುರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ರೋಜರ್ಸ್ ಅಂಡ್ ರೋವರ್ಸ್ ಘಟಕದ ಕಾರ್ಯಗಾರ ನಡೆಯಿತು. ಎಸ್.ಎಸ್. ಬೊಮ್ಮನಹಳ್ಳಿ, ಪಿ.ಎಸ್. ಕುಂಬಾರ, ಎಸ್.ಟಿ. ಬೋಳರಡ್ಡಿ ಮತ್ತಿತರರಿದ್ದಾರೆ.
Published on
ವಿಜಯಪುರ : ನಗರದ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ 2025-26ನೇ ಸಾಲಿನ ರೋಜರ್ಸ್ ಅಂಡ್ ರೋವರ್ಸ್ ಘಟಕದ ಕಾರ್ಯಗಾರ ಗುರುವಾರ ನಡೆಯಿತು.
ಮುಖ್ಯ ಅತಿಥಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತ ಮುಖ್ಯ ಅತಿಥಿ ಡಿ.ಬಿ. ಅತ್ತಾರ ಮಾತನಾಡಿ, ವ್ಯಕ್ತಿ, ಪುಸ್ತಕ ಮತ್ತು ಸ್ಥಳ ಎಂಬ ಮೂರು ಅಂಶಗಳು ವ್ಯಕ್ತಿತ್ವ ವಿಕಸನದ ಪ್ರಮುಖ ತಳಹದಿಗಳಾಗಿವೆ ಎಂದರು.
ಅತಿಥಿ ಜಿಲ್ಲಾ ತರಬೇತಿ ಆಯುಕ್ತ ಎಸ್.ಎಸ್. ಬೊಮ್ಮನಹಳ್ಳಿ ಮಾತನಾಡಿ, ಬೆಳವಣಿಗೆ ಮತ್ತು ಬದಲಾವಣೆ ಜೀವನದ ಮುಖ್ಯ ಅಂಶಗಳಾಗಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ನ ಒಂಬತ್ತು ನಿಯಮಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಅತಿಥಿ ಪಿ.ಎಸ್. ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಎಸ್.ಟಿ. ಬೋಳರಡ್ಡಿ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕ ಆರ್.ಆರ್.ಎಲ್. ಕುಂಟೆ ಉಪಸ್ಥಿತಿ ವಹಿಸಿದ್ದರು. ಸೌಭಾಗ್ಯ ಹಟ್ಟಿ ಪ್ರಾರ್ಥಿಸಿದರು. ಮಹಾಂತೇಶ ನಾವಿ ನಿರೂಪಿಸಿದರು. ಶಾರದಾ ವಂದಿಸಿದರು.
ಕಾರ್ಯಗಾರದಲ್ಲಿ ಸುಮಾರು 180 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net