ಗೊಳಸಂಗಿ ಚ.ಚ. ಹೆಬ್ಬಾಳ ಸರ್ಕಾರಿ ಪದವಿ ಕಾಲೇಜಿನ ವತಿಯಿಂದ ತೆಲಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಎನ್‌ಟಿಪಿಸಿ ಠಾಣಾ ಪಿಎಸ್‌ಐ ಯತೀಶ ಕೆ.ಎನ್. ಮಾತನಾಡಿದರು. ಪ್ರಾಚಾರ್ಯ ಎಸ್.ಆರ್. ಕುಂಬಾರ, ಅರುಣಕುಮಾರ ರಾಠೋಢ, ಜಟ್ಟೆಪ್ಪ ಚಲಮಿ ಮತ್ತಿತರರಿದ್ದರು.
ರಸ್ತೆ ಮೇಲೆ ಸಂಚಾರಿಸುವಾಗ ವಾಹನ ಸವಾರರು ಒಂದು ಕ್ಷಣ ಮೈ ಮರೆತರೆ ಅವರ ಬದುಕೇ ಇನ್ನಿಲ್ಲವಾಗುವ ಜತೆಗೆ ಅವರನ್ನೇ ನಂಬಿಕೊಡ ಕುಟುಂಬಕ್ಕೆ ದಿಕ್ಕು ದಿಸೆ ಇಲ್ಲದಂತಾಗುವ ಗಳಿಗೆ ಎದುರಾದರೆ ಅಚ್ಚರಿ ಪಡಬೇಕಿಲ್ಲ. ಆದ್ದರಿಂದ ಬೈಕ್ ಸವಾರರು ಯಾವುದೇ ಕಾರಣಕ್ಕೂ ಹೆಲ್ಮೆಟ್ ಇಲ್ಲದೇ ಸಂಚರಿಸಬೇಡಿ ಎಂದು ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣಾ ಪಿಎಸ್‌ಐ ಯತೀಶ ಕೆ.ಎನ್. ಹೇಳಿದರು.
ಗ್ರಾಮದ ಚ.ಚ. ಹೆಬ್ಬಾಳ ಸರ್ಕಾರಿ ಪದವಿ ಕಾಲೇಜ ವತಿಯಿಂದ ತೆಲಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಇತ್ತೀಚೆಗೆ ಪಾಲ್ಗೊಂಡು ಅವರು ಮಾತನಾಡಿದರು.
ಇದಕ್ಕೂ ಮೊದಲು ಗ್ರಾಮದ ಮಹಾತ್ಮಗಾಂವೃತ್ತ, ದತ್ತಗುರು ಸದಾನಂದ ಮಹಾರಾಜರ ಆಶ್ರಮ ಆವರಣ, ಬಸ್ ನಿಲ್ದಾಣವನ್ನು ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.