ಗ್ರಾಮೀಣ ಪತ್ರಕರ್ತರು ಹವ್ಯಾಸಿಗಳಾದರೆ ಗೌರವ

ವಿಘಟನೆಯತ್ತ ಸಾಗುತ್ತಿರುವ ಇಂದಿನ ಪತ್ರಕರ್ತರ ನಡುವೆ ನಿಜವಾದ ಕಾರ್ಯನಿರತ ಪತ್ರಕರ್ತರು ಮುಜುಗರ ಪಡುವಂಥ ವಾತಾವರಣ ನಿರ್ಮಾಣಗೊಂಡಿ
ವಿಘಟನೆಯತ್ತ ಸಾಗುತ್ತಿರುವ ಇಂದಿನ ಪತ್ರಕರ್ತರ ನಡುವೆ ನಿಜವಾದ ಕಾರ್ಯನಿರತ ಪತ್ರಕರ್ತರು ಮುಜುಗರ ಪಡುವಂಥ ವಾತಾವರಣ ನಿರ್ಮಾಣಗೊಂಡಿ
Published on

ಮುದ್ದೇಬಿಹಾಳ:

ವಿಘಟನೆಯತ್ತ ಸಾಗುತ್ತಿರುವ ಇಂದಿನ ಪತ್ರಕರ್ತರ ನಡುವೆ ನಿಜವಾದ ಕಾರ್ಯನಿರತ ಪತ್ರಕರ್ತರು ಮುಜುಗರ ಪಡುವಂಥ ವಾತಾವರಣ ನಿರ್ಮಾಣಗೊಂಡಿದೆ. ಗ್ರಾಮೀಣ ಪತ್ರಕರ್ತರು ಪತ್ರಿಕೋದ್ಯಮವನ್ನೇ ಉದ್ಯೋಗ ಮಾಡಿಕೊಳ್ಳದೆ ಅದನ್ನು ಹವ್ಯಾಸ ಎಂದು ಭಾವಿಸಿ ಮೂಲ ವೃತ್ತಿಯ ಜತೆಗೆ ಪತ್ರಿಕೋದ್ಯಮವನ್ನು ಉಪವೃತ್ತಿಯನ್ನಾಗಿ ಮಾಡಿಕೊಂಡರೆ ಮಾತ್ರ ಈ ಕ್ಷೇತ್ರದಲ್ಲಿ ಗೌರವ ಗಳಿಸುವುದು ಸಾಧ್ಯವಿದೆ ಎಂದು ಕಾನಿಪ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಿ.ಬಿ. ವಡವಡಗಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ ಹಾಗೂ ಜಿ¯್ಲÁ ಘಟಕ ಒದಗಿಸಿದ ಬ್ಯಾಗ್‌ಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮಿಂದಲೇ ಪತ್ರಿಕೋದ್ಯಮದ `ಅ' ದಿಂದ ಕಲಿತವರು ಇಂದು ನಮ್ಮನ್ನೇ ಕಡೆಗಣಿಸಿ ಪತ್ರಕರ್ತರ ಕೆಲಸವನ್ನು ಸೇವೆ ಎಂದು ಪರಿಗಣಿಸದೆ ಹೊಟ್ಟೆಪಾಡಿನ ಉದ್ಯೋಗದಂತೆ ಬಳಸಿಕೊಳ್ಳುತ್ತಿರುವುದು ವಿಷಾಧ ಪಡುವಂಥz್ದÁಗಿದೆ. ಪತ್ರಕರ್ತರನ್ನು ಸಮಾಜ ಎಚ್ಚರದಿಂದ ನೋಡುತ್ತಿರುತ್ತದೆ. ನಮ್ಮ ಒಳ್ಳೆಯ ಚಟುವಟಿಕೆಗಳನ್ನು ಹೊಗಳುತ್ತದೆ. ನಾವು ದಾರಿ ತಪ್ಪಿದರೆ, ಪತ್ರಿಕೋದ್ಯಮವನ್ನು ದುರ್ಬಳಕೆ ಮಾಡಿಕೊಂಡರೆ ತೆಗಳುವುದು ಮಾತ್ರವಲ್ಲದೆ ಅಂಥವರ ಕುಟುಂಬವನ್ನೂ ಹೀಗಳೆಯುವ ಮಟ್ಟಕ್ಕೆ ಹೋಗುತ್ತಿರುವುದು ಪತ್ರಕರ್ತರ ಆತ್ಮವಿಮರ್ಶೆಗೆ ದಾರಿ ಮಾಡಿಕೊಡುವಂತಿದೆ ಎಂದರು. ಕೆಲಸಕ್ಕೆ ಗೌರವ ತಂದು ಕೊಡುವ ರೀತಿಯಲ್ಲಿ ಮುನ್ನಡೆಯುತ್ತೇವೆ ಎನ್ನುವ ಸಂಕಲ್ಪದಿAದ ಪತ್ರಿಕಾ ದಿನಾಚರಣೆ ಮಾಡಬೇಕು ಎಂದರು.
ಸAಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಾಗವಾನ ಅವರು ಮಾತನಾಡಿ, ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಾರಂಭದಿAದ ಹಿಡಿದು ಇಂದಿನ ಆಧುನಿಕ ಪತ್ರಿಕೋದ್ಯಮದ ಒಳ ಹರಿವು, ಆಗು ಹೋಗುಗಳ ಕುರಿತು ವಿಷಯ ಮಂಡಿಸಿ ಹರ್ಮನ್ ಮೋಗ್ಲಿಂಗ್, ಮಹಾತ್ಮ ಗಾಂಽÃಜಿ, ಡಾ.ಬಿ.ಆರ್. ಅಂಬೇಡ್ಕರ್, -À.ಗು.ಹಳಕಟ್ಟಿ, ಪಿ.ಲಂಕೇಶ್ ಸೇರಿ ಹಲವು ಶ್ರೇಷ್ಠ ಪತ್ರಕರ್ತರನ್ನು ಸ್ಮರಿಸಿಕೊಂಡು ಅವರ ಮನೋಭಾವ ಇಂದಿನ ಯುವ ಪತ್ರಕರ್ತರಿಗೆ ಬರಬೇಕು ಎಂದರು.
ಉಪನ್ಯಾಸಕ ರವೀಂದ್ರ ನಂದೆಪ್ಪನವರ ಮಾತನಾಡಿ, ಪತ್ರಿಕೋದ್ಯಮಕ್ಕೆ ವಿಶೇಷ ಇತಿಹಾಸ ಇದೆ. ಪತ್ರಕರ್ತರು ಸಮಾಜಮುಖಿಯಾಗಿ ಚಟುವಟಿಕೆಗಳು ಇತರರಿಗೆ ಮಾದರಿಯಾಗಿರಬೇಕು. ಪತ್ರಕರ್ತರಾದವರು ಓದುವುದನ್ನು, ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಹಿರಿಯ ಪತ್ರಕರ್ತ, ಸಂಘದ ಮಾಜಿ ಅಧ್ಯಕ್ಷ ಎ.ಎಲï. ಮು¯್ಲÁ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜಿ¯್ಲÁ ಘಟಕವು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ರೂಪದಲ್ಲಿ ಉಚಿತವಾಗಿ ನೀಡಿದ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಬಸವರಾಜ ಹುಲಗಣ್ಣಿ, ಮುತ್ತು ಬೀರಗೊಂಡ(ಢವಳಗಿ), ಕಾರ್ಯದರ್ಶಿ ಕಾಶಿನಾಥ ಬಿರಾದಾರ, ಖಜಾಂಚಿ ಲಾಡ್ಲೆಮಶ್ಯಾಕ ನದಾ-À, ಸದಸ್ಯರಾದ ಮುತ್ತು ವಡವಡಗಿ, ಸಿದ್ದು ಚಲವಾದಿ, ಬಸವರಾಜ ಕುಂಬಾರ, ಮಹೆಬೂಬ ಹಳ್ಳೂರ, ಮಹಾಂತೇಶ ನೂಲಿನವರ್, ಸಾಗರ ಉಕ್ಕಲಿ, ರಾಜಶೇಖರ ಸಜ್ಜನ, ಈಶ್ವರ ಈಳಗೇರ, ನೂರೇನಬಿ ನದಾ-À, ಸೂರಜ್ ರಿಸಾಲ್ದಾರ್, ಗುರುರಾಜ ಬಡಿಗೇರ, ಬಿ.ಎಸ್. ಪಾಟೀಲ, ಮುನೀರ್ ಅವಟಿಗೇರ, ನಾಗೇಂದ್ರ ಶಿವಸಿಂಪಿ, ರಫೀಕ ಬೀಳಗಿ, ಸz್ದÁಂ ನದಾ-À, ವಿಕ್ರಂ ಬಿರಾದಾರ ಇದ್ದರು.
ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ ಹಾಗೂ ಜಿ¯್ಲÁ ಘಟಕ ಒದಗಿಸಿದ ಬ್ಯಾಗ್‌ಗಳ ವಿತರಣಾ ಸಮಾರಂಭ ನಡೆಯಿತು. ಡಿ.ಬಿ. ವಡವಡಗಿ, ಬಸವರಾಜ ಹುಲಗಣ್ಣಿ, ಮುತ್ತು ಬೀರಗೊಂಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net