ಪುನರ್ವಸತಿ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಿ
ಬುರಣಾಪುರದಲ್ಲಿರುವ ಸ್ಲಂ ನಿವಾಸಿಗಳ ಪುನರ್ವಸತಿ ಜಾಗ ಅಭಿವೃದ್ಧಿಗೆ 25 ಲಕ್ಷ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ದಲಿತ ಸ್ವರಾಜ್ಯ ಸೇನೆ -ಕರ್ನಾಟಕ ಸಂಘಟನೆ ಪದಾಽಕಾರಿಗಳು ವಿಜಯಪುರದಲ್ಲಿ ವಿಡಿ ಆಯುಕ್ತ ರಾಜಶೇಖರ ಡಂಬಳ ಅವರಿಗೆ ಮನವಿ ಸಲ್ಲಿಸಿದರು.
ವಿಜಯಪುರ : ಬುರಣಾಪುರದಲ್ಲಿರುವ ಸ್ಲಂ ನಿವಾಸಿಗಳ ಪುರ್ನರ್ವಸತಿ ಜಾಗ ಅಭಿವೃದ್ಧಿಗೆ 25 ಲಕ್ಷ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ ದಲಿತ ಸ್ವರಾಜ್ಯ ಸೇನೆ -ಕರ್ನಾಟಕ ಸಂಘಟನೆ ಪದಾಽಕಾರಿಗಳು ಇತ್ತೀಚೆಗೆ ನಗರಾಭಿವೃದ್ಧಿ ಪ್ರಾಽಕಾರದ ಆಯುಕ್ತ ರಾಜಶೇಖರ ಡಂಬಳ ಅವರಿಗೆ ಮನವಿ ಸಲ್ಲಿಸಿದರು.
ನಗರಾಭಿವೃದ್ಧಿ ಪ್ರಾಽಕಾರವು ಇತ್ತೀಚೆಗೆ ತನ್ನ ಸಾಮಾನ್ಯ ಸಭೆಯಲ್ಲಿ 47.50 ಕೋಟಿ ರೂ. ವೆಚ್ಚದ ಯೋಜನೆಗಳು ಹಾಗೂ ಮಹಾಯೋಜನೆ-2041ಕ್ಕೆ ಅನುಮೋದನೆ ನೀಡಿರುವುದು ಶ್ಲಾಘನಾರ್ಹ. ಆದರೆ, ಈ ಅಭಿವೃದ್ಧಿ ಯೋಜನೆಗಳ ಜತೆಗೆ ನಗರದ ಶೋಷಿತ ಹಾಗೂ ಬಡ ಸ್ಲಂ ನಿವಾಸಿಗಳ ಪುನರ್ವಸತಿ ಮತ್ತು ಹಕ್ಕುಗಳ ರಕ್ಷಣೆಗೂ ಪ್ರಾಽಕಾರವು ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಸಂಘಟನೆ ಒತ್ತಾಯಿಸಿದೆ.
ಬುರಣಾಪುರ ಗ್ರಾಮದ ಸರ್ವೆ ನಂ. 67ರಲ್ಲಿ ಸ್ಲಂ ನಿವಾಸಿಗಳ ಸ್ಥಳಾಂತರಕ್ಕಾಗಿ ಗುರುತಿಸಲಾಗಿರುವ 5 ಎಕರೆ ಜಾಗವು ಪ್ರಸ್ತುತ ಭಾರಿ ತಗ್ಗು-ದಿಣ್ಣೆ ಹಾಗೂ ದಟ್ಟ ಮುಳ್ಳುಕಂಟಿಗಳಿAದ ಕೂಡಿದೆ. ಅಲ್ಲದೆ, ವಾಸಕ್ಕೆ ಸಂಪೂರ್ಣ ಯೋಗ್ಯವಾಗಿಲ್ಲ. ರಾಜ್ಯ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973 ಹಾಗೂ ಕರ್ನಾಟಕ ನಗರ ನಗರಾಭಿವೃದ್ಧಿ ಪ್ರಾಽಕಾರಗಳ ಕಾಯ್ದೆ 1987ರ ಪ್ರಾವಧಾನಗಳ ಪ್ರಕಾರ ಬಡ ನಾಗರಿಕರಿಗೆ ಯೋಗ್ಯ ಪುನರ್ವಸತಿ ಕಲ್ಪಿಸುವುದು ಪ್ರಾಽಕಾರದ ಶಾಸನಬದ್ಧ ಕರ್ತವ್ಯವಾಗಿದೆ.
ಹೀಗಾಗಿ, ಈ 5 ಎಕರೆ ಭೂಮಿಯನ್ನು ತಕ್ಷಣವೇ ಸಮತಟ್ಟುಗೊಳಿಸಿ, ಕುಡಿಯುವ ನೀರಿನ ಪೂರೈಕೆಗಾಗಿ ಬೋರ್‌ವೆಲ್ ಕೊರೆಸಿ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು 25 ಲಕ್ಷ ರೂ. ವೆಚ್ಚದ ಹೆಚ್ಚುವರಿ ಆಡಳಿತಾತ್ಮಕ ಪ್ರಸ್ತಾವನೆ ಸಿದ್ಧಪಡಿಸಿ ಅನುದಾನ ಕಾಯ್ದಿರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.