ಕೋಮು ಸಾಮರಸ್ಯದಿಂದ ರಂಗಪಂಚಮಿ ಆಚರಣೆ

  ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದ ವಿರಕ್ತಮಠದ ಶ್ರೀ ಸಿದ್ಧಲಿಂಗ ಶ್ರೀಗಳು ಹಾಗೂ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ  ಈರಣ್ಣ ಪಟ್ಟಣಶೆಟ್ಟಿ ರಂಗಪಂಚಮಿ ಬಣ್ಣದ ಹಬ್ಬಕ್ಕೆ ಚಾಲನೆ ನೀಡಿದರು.
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದ ವಿರಕ್ತಮಠದ ಶ್ರೀ ಸಿದ್ಧಲಿಂಗ ಶ್ರೀಗಳು ಹಾಗೂ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ರಂಗಪಂಚಮಿ ಬಣ್ಣದ ಹಬ್ಬಕ್ಕೆ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಚಾಲನೆ
  • ಬೃಹತ್ ಮೆರವಣಿಗೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಭಾನುವಾರ ರಂಗಪಂಚಮಿ ಬಣ್ಣದ ಹಬ್ಬವನ್ನು ಎಲ್ಲಾ ಧರ್ಮದವರು ಕೂಡಿ ಅತ್ಯಂತ ವಿಶೇಷ ವಿನೂತನ ವೈಭವದಿಂದ ಆಚರಿಸಲಾಯಿತು.
ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ 10 ಗಂಟೆಗೆ ವಿರಕ್ತಮಠದ ಶ್ರೀ ಸಿದ್ಧಲಿಂಗ ಶ್ರೀಗಳು ಹಾಗೂ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ರಂಗಪಂಚಮಿ ಬಣ್ಣದ ಹಬ್ಬಕ್ಕೆ ಚಾಲನೆ ನೀಡಿದರು.
ನಂತರ ಎರಡು ಟ್ರಾೃಕ್ಟರ್‌ಗಳಲ್ಲಿ ಹತ್ತಾರು ಬ್ಯಾರಲ್‌ಗಳಲ್ಲಿ ಬಣ್ಣ ತುಂಬಿ ಗ್ರಾಮೀಣ ಭಾಗದ ಕಲಾತಂಡದೊಂದಿಗೆ ಹಾಗೂ ಡಿಜೆ, ಹಲಗೆ ತಂಡದೊಂದಿಗೆ ಸಾವಿರಾರು ಜನರು ಗಣಪತಿ ಚೌಕ, ವಿರಕ್ತ ಮಠ ಬಸವ ಜನ್ಮ ಸ್ಮಾರಕ, ಬಸವ ಭವನ, ವೀರರಾಣಿ ಕಿತ್ತೂರು ಚನ್ನಮ್ಮಳ ವೃತ್ತ ಮಾರ್ಗವಾಗಿ ಮೆರವಣಿಗೆ ಮೂಲಕ ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರೆಚುತ್ತಾ ಬೃಹತ್ ಮೆರವಣಿಗೆ ಬಸವೇಶ್ವರ ವೃತ್ತಕ್ಕೆ ಬಂದು ತಲುಪಿತು.
ಬಸವೇಶ್ವರ ದೇವಸ್ಥಾನದ ಹೊರ ಆವರಣ ಹಳೆ ಸಂತೆಕಟ್ಟೆಯಲ್ಲಿ ಹಾಕಲಾಗಿರುವ ಕಾರಂಜಿ ಬಣ್ಣದಲ್ಲಿ ಮತ್ತು ವಿವಿಧ ಗಾನಗಳಿಗೆ ನೃತ್ಯ ಮಾಡುತ್ತಾ ಹಿರಿಯ-ಕಿರಿಯ,ಮೇಲು-ಕೀಳು, ಭೇದ-ಭಾವ ಮರೆತು ಪರಸ್ಪರ ಒಬ್ಬರಿಗೊಬ್ಬರೂ ಬಣ್ಣ ಹಚ್ಚಿ ಅತ್ಯಂತ ಸಂಭ್ರಮದಿಂದ ವಿಶೇಷ ವಿನೂತನ ರಂಗ ಪಂಚಮಿ ಬಣ್ಣದಾಟವನ್ನು ಆಡಲಾಯಿತು.
ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯಿಂದ ಬಸವ ಜನ್ಮ ಸ್ಮಾರಕದ ಮುಂದೆ ಹಾಕಲಾಗಿರುವ ಕಾರಂಜಿ ಬಣ್ಣದ ಛತ್ರದಲ್ಲಿ ಯುವಕರೆಲ್ಲರೂ ಸೇರಿಕೊಂಡು ಹಾಡು, ಹಲಗೆ, ನಾದಕ್ಕೆ ನೃತ್ಯ ಮಾಡಿ ಪರಸ್ಪರ ಬಣ್ಣದೋಕುಳಿ ಆಟ ಆಡಿ ರಂಗಪಂಚಮಿ ಬಣ್ಣದ ಹಬ್ಬದಲ್ಲಿ ಸಂಭ್ರಮಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಗೆಳೆಯರ ಬಳಗದಿಂದ ಬೃಹತ್ ರಂಗೋತ್ಸವ ರಂಗಿನಾಟ ಆಯೋಜನೆ ಮಾಡಲಾಗಿತ್ತು. ಗದಗಿನ ಎ.ಎನ್. ಮುರಾರಿ ಮೇಲೊಡಿಸ್ ಹಾಡುಗಳಿಗೆ ನೂರಾರು ಯುವಕರು ಕುಣಿದು ಗುಪ್ಪಳಿಸಿ ರಂಗಪಂಚಮಿ ಬಣ್ಣದ ಹಬ್ಬವನ್ನು ಸಡಗರ ಸಂತೋಷದಿಂದ ಆಚರಣೆ ಮಾಡಿದರು.
ವಿವಿಧ ಗಲ್ಲಿ, ಓಣಿ, ಬಡಾವಣೆ, ನಗರಗಳಲ್ಲಿ ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಭಾರತದ ಸಂಸ್ಕೃತಿ ರಂಗ ಪಂಚಮಿ ಬಣ್ಣದಾಟವನ್ನು ಆಚರಣೆ ಮಾಡಿದರು.
ಯವಕರು ದ್ವಿಚಕ್ರ ವಾಹನದ ಮೇಲೆ ಹಲಗೆ ಬಾರಿಸುತ್ತಾ ತಮ್ಮ ಸ್ನೇಹಿತರು ಸಂಬಂಧಗಳ ಮನೆಗಳಿಗೆ ತೆರಳಿ ಪರಸ್ಪರ ಬಣ್ಣ ಹಚ್ಚಿ, ವಿವಿಧ ಗಲ್ಲಿ. ಓಣಿ, ಬಡಾವಣೆ, ನಗರಗಳಲ್ಲಿ ಬಣ್ಣ ಎರಚಿ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಸಂಜೆ 4:00ವರೆಗೆ ಆಚರಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net