ಮಹಾ ಮೃತ್ಯುಂಜಯ ಯಜ್ಞದ ಪುರ್ಣಾಹುತಿ ಸಂಪನ್ನ

ವಿಜಯಪುರ ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ದೇವಸ್ಥಾನದಲ್ಲಿ  ಅಽಕಮಾಸ ಪ್ರಯುಕ್ತ ಮಹಾಮೃತ್ಯುಂಜಯ ಹೋಮ ನೆರವೇರಿತು.
ವಿಜಯಪುರ ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ದೇವಸ್ಥಾನದಲ್ಲಿ ಅಽಕಮಾಸ ಪ್ರಯುಕ್ತ ಮಹಾಮೃತ್ಯುಂಜಯ ಹೋಮ ನೆರವೇರಿತು.
Published on
ವಿಜಯಪುರ : ಮೂವತ್ಮೂರು ಬ್ರಾಹ್ಮಣರ ಏಕಕಂಠದ ಮಂತ್ರಘೋಷದ ನಡುವೆ ಮಹಾ ಮೃತ್ಯುಂಜಯ ಯಜ್ಞದ ಪುರ್ಣಾಹುತಿ ಸಂಪನ್ನಗೊAಡಿತು.
ಇಲ್ಲಿನ ಗಣೇಶ ನಗರದ ಸಾಕ್ಷಿ ಹನುಮಾನ ದೇವಸ್ಥಾನದಲ್ಲಿ ಅಽಕಮಾಸದ ಪ್ರಯುಕ್ತ ವಿದ್ವಾನ್ ಗುರುರಾಜ ಆಚಾರ್ಯರ ಸಂಕಲ್ಪದAತೆ ಸುಮಾರು 10-15 ಸಾಧಕರು ಪ್ರತಿ ದಿನ ಮಹಾಮೃತ್ಯುಂಜಯ ಜಪ ಕೈಗೊಂಡಿದ್ದರು. ಅದರ ಅಂಗವಾಗಿ ಶನಿವಾರ ಮಹಾಮೃತ್ಯುಂಜಯ ಯಜ್ಞ ನಡೆಯಿತು.
ಪಂ. ಪ್ರಭಂಜನಾಚಾರ್ಯ ಪೂಜಾರ, ಶ್ರೀಪಾದಾಚಾರ್ಯ (ಯರಗೋಳ), ಶ್ರೀಕಾಂತಾಚಾರ್ಯ ಆಶ್ರೀತ್, ಪ್ರಾಣೇಶ ಆಚಾರ್ಯ ಆಶ್ರೀತ್, ಅಚ್ಯುತ್ ಆಚಾರ್ಯ ಪುರೋಹಿತ, ದತ್ತಾತ್ರೆಯ ದೀಕ್ಷಿತ, ಅಶೋಕ ಜೋಶಿ ನೇತೃತ್ವದಲ್ಲಿ ಹೋಮ ಹವನ ನೆರವೇರಿತು.
ಸ್ಥಳೀಯ ಮಹಿಳಾ ಮಂಡಳದವರು ಸ್ಥಾಪಿಸಿದ ಅಽಕ ಗೌರಿಗೆ ವಿಶೇಷ ಪೂಜೆ, ಅಲಂಕಾರ, ಹೂರಣದ ಆರತಿ, 33 ದಾಸರ ಹಾಡುಗಳನ್ನು ಸಮರ್ಪಿಸಲಾಯಿತು. ಸುಮಂಗಲಿಯರು ಪರಸ್ಪರ ಅಽಕಮಾಸದ ಬಾಗಿನ ಸಮರ್ಪಿಸಿ ಉಡಿ ತುಂಬಿದರು.
ಸAಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾ ಶಸöಚಿಕಿತ್ಸಕ ಶಿವಾನಂದ ಮಾಸ್ತಿಹೋಳಿ, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಗೋಪಾಲ ನಾಯಕ, ಪಾಲಿಕೆ ಸದಸ್ಯ ಕುಮಾರ ಗಡಗಿ, ರಮೇಶ ಬಿದನೂರ, ರಾಜು ಗಚ್ಚಿನಮಠ, ಪ್ರಭು ಮಲ್ಲಿಕಾರ್ಜುನಮಠ, ಬಾಬು ರಾಜೇಂದ್ರ ನಾಯಕ, ಕಾನಿಪ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ, ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ, ಷಡಕ್ಷರಿ, ಮಹೇಶ ಶೆಟಗಾರ, ಶ್ರೀಶೈಲ ಬೊಮ್ಮನಹಳ್ಳಿ, ಸುನೀಲಗೌಡ ಬಿರಾದಾರ, ಸಂತೋಷ ಶೆಟ್ಟರ, ಲಕ್ಷಿ÷್ಮÃಕಾಂತ ಚನಗೊಂಡ, ನಂದ್ಯಾಳ ಸರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net