ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

ವಿಜಯಪುರದ ಭವಾನಿ ನಗರದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು. ಶಾಂತೇಶ ಕಳಸಗೊಂಡ, ರಾಜೇಶ ದೇವಗಿರಿ, ಚಂದ್ರಶೇಖರ ಕವಟಗಿ ಮತ್ತಿತರರಿದ್ದಾರೆ.
ವಿಜಯಪುರದ ಭವಾನಿ ನಗರದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು. ಶಾಂತೇಶ ಕಳಸಗೊಂಡ, ರಾಜೇಶ ದೇವಗಿರಿ, ಚಂದ್ರಶೇಖರ ಕವಟಗಿ ಮತ್ತಿತರರಿದ್ದಾರೆ.
Published on
ವಿಜಯಪುರ: ಪಾಲಕರು ಮಕ್ಕಳಿಗೆ ಸಂಸ್ಕಾರದ ಜತೆಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕೆAದು ಉದ್ಯಮಿ ಶಾಂತೇಶ ಕಳಸಗೊಂಡ ಹೇಳಿದರು.
ಇಲ್ಲಿನ ಭವಾನಿ ನಗರದಲ್ಲಿ ಭವಾನಿ ಟ್ಯೂಷನ್ ಕ್ಲಾಸಿಸ್ ವತಿಯಿಂಧ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಅಂತಿಮ ಸಿದ್ಧತೆ ಮಾಡಿಕೊಂಡು ಕೊನೇ ಕ್ಷಣದಲ್ಲಿ ತಮ್ಮ ಜೇಬು ಪರಿಶೀಲಿಸಿದಾಗ ಅವರಿಗೆ ಆಗ ದೊರೆತಿದ್ದು, ಸ್ವಾಮಿ ವಿವೇಕಾನಂದರ ಕಿರು ಪುಸ್ತಕ. ಅದನ್ನು ಓದಿ ಶಿಕ್ಷಣದ ಶಕ್ತಿ ಅರಿತ ಅಣ್ಣಾ ಹಜಾರೆ ಅವರು ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕೈಗೊಂಡ ಹೋರಾಟ ಸಾಕಷ್ಟು ಜಾಗೃತಿ ಮೂಡಿಸಿತ್ತು ಎಂದು ತಿಳಿಸಿದರು.
ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂಬ ವಿವೇಕಾನಂದರ ಮಾತನ್ನು ನಮ್ಮ ಜೀವನದಲ್ಲಿ ತಪ್ಪದೆ ಅಳವಡಿಸಿಕೊಳ್ಳಬೇಕು. ಧೈರ್ಯವಿದ್ದರೇ ಜೀವನದಲ್ಲಿ ಏನನ್ನಾದರೂ ಸಾಽಸಲು ಸಾಧ್ಯ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ರಾಜೇಶ ದೇವಗಿರಿ ಮಾತನಾಡಿ, ಮನುಷ್ಯನಿಗೆ ಉತ್ತಮ ಸಂಸ್ಕಾರ ನೀಡಿ ಅವನಲ್ಲಿ ಸಹಿಷ್ಣುತೆ, ಧೈರ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡಿದರೆ ಆತ ಜಗತ್ತಿನ ಯಾವ ಮೂಲೆಯಲ್ಲದರೂ ಬದುಕಿ ಕಟ್ಟಿಕೊಂಡು ಸಾಧನೆಗೈಯಲು ಸಾಧ್ಯ ಎಂದರು.
ಅಭಿಷೇಕ ಕುಮಸಗಿ ಮಾತನಾಡಿದರು. ನಂತರ ಮಕ್ಕಳು ಸ್ವಾಮಿ ವಿವೇಕಾನಂದರ ಕಿರು ನಾಟಕ ಪ್ರದರ್ಶಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ, ಸಂಗಮೇಶ ಹೌದೆ, ಕೃಷ್ಣಾ ಜಗದಾಳೆ, ಯೋಗೇಶ ತರಸೆ, ವಿನಾಯಕ ಶಿಂಧೆ, ಕೃಷ್ಣಾ ಜಾಧವ, ದಿಲೀಪ ಭಾರತೆ, ಆನಂದ ಚವಾಣ್, ಕಿರಣ ಹೊನಕಳಸೆ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net