ಹಕ್ಕು ಪತ್ರ ವಿತರಿಸಲು ಧರಣಿ

ಶಿಖಾರ ಖಾನೆ ಭಾಗ-3ರ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ವಿಜಯಪುರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಮನವಿ ಸಲ್ಲಿಸಿದರು. ಮುತ್ತು ಭೋವಿ, ಮಿನಾಕ್ಷಿ ಕಾಲೇಭಾಗ, ಪಂಡಿತ ಖಂಡಗಳೆ, ಪುಪ್ಪಾ ನೇಗಿನಾಳ ಮತ್ತಿತರರಿದ್ದಾರೆ.
ಶಿಖಾರ ಖಾನೆ ಭಾಗ-3ರ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ವಿಜಯಪುರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಮನವಿ ಸಲ್ಲಿಸಿದರು. ಮುತ್ತು ಭೋವಿ, ಮಿನಾಕ್ಷಿ ಕಾಲೇಭಾಗ, ಪಂಡಿತ ಖಂಡಗಳೆ, ಪುಪ್ಪಾ ನೇಗಿನಾಳ ಮತ್ತಿತರರಿದ್ದಾರೆ.
Published on
ವಿಜಯಪುರ: ಶಿಖಾರ ಖಾನೆ ಭಾಗ-3ರ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ಗುರುವಾರ ನಗರದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಸ್ಲಂ ನಿವಾಸಿಗಳ ಧರಣಿ ನಡೆಸಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ, ಶಿಖಾನೆ ಖಾನೆ ಭಾಗ-3ರ ಸ್ಲಂ ನಿವಾಸಿಗಳು ಹಾಗೂ ವಿಜಯಪುರ ಜನವೇದಿಕೆ ಮತ್ತು ಬಿಜÁಪುರ ನಗರ ಸ್ಲಂ ಅಭಿವೃದ್ಧಿ ಸಮಿತಿಗಳ ಸಹಯೋಗದಲ್ಲಿ ಧರಣಿ ಕೈಗೊಳ್ಳಲಾಯಿತು. ಧರಣಿಯಲ್ಲಿ ಸುಮಾರು 50 ಕ್ಕೂ ಅಽಕ ಸ್ಲಂ ನಿವಾಸಿಗಳು ಭಾಗವಹಿಸಿ ಬೇಕೆ ಬೇಕು ಹಕ್ಕು ಪತ್ರ ಬೇಕು ಎಂಬ ಘೋಷಣೆ ಕೋಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುತ್ತು ಭೋವಿ ಮಾತನಾಡಿ, ಶಿಖಾರ ಖಾನೆ ಭಾಗ-3ರ ಸ್ಲಂ ಪ್ರದೇಶದಲ್ಲಿ 150 ಕ್ಕಿಂತ ಅಽಕ ಕುಟುಂಬಗಳು ವಾಸಿಸುತ್ತಿವೆ. ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಕಾಯಿದೆ ಅಡಿ ಘೋಷಣೆಯಾಗಿ ಅಲ್ಲದೇ, ಹಕ್ಕು ಪತ್ರಗಳಿಗಾಗಿ ಮಂಡಳಿಯವರು ಇಲಾಖೆ ವತಿಯಿಂದ ಸರ್ವೆ ಕೂಡ ನಡೆಸಿದ್ದಾರೆ. ಕೆಲ ನಿವಾಸಿಗಳು ಹಕ್ಕು ಪತ್ರಕ್ಕಾಗಿ ಮಂಡಳಿಗೆ ಹಣವು ಸಹ ತುಂಬಿದ್ದಾರೆ. ಸದ್ಯ ಹಣ ಭರ್ತಿ ಮಾಡಿ 1 ವರ್ಷದಿಂದ ಹಕ್ಕು ಪತ್ರ ವಿತರಿಸುವುದಾಗಿ ಹೇಳುತ್ತಾ ಸದ್ಯದವರೆಗೆ ವಿತರಿಸಿಲ್ಲ ಎಂದು ದೂರಿದರು.
ಸ್ಲಂ ನಿವಾಸಿಗಳು ಹಕ್ಕು ಪತ್ರ ಬರುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ನಿಮ್ಮ ಸುಳ್ಳು ಆಶ್ವಾಸನೆ ಹಾಗೂ ಸರ್ವೆಯರ ಬಂದು ಸರ್ವೆ ಮಾಡುವುದು, ಅಽಕಾರಿಗಳು ಸ್ಲಂಮಿಗೆ ಬಂದು ಜನರಿಂದÀ ದಾಖಲಾತಿ ಪಡೆಯುವುದು ಅಲ್ಲಿನ ನಿವಾಸಿಗಳಿಗೆ ಬೇಸರವಾಗಿದೆ. ಅಲ್ಲದೇ, ಈ ಕುರಿತು ಕಳೇದ ವಾರ ಜಿಲ್ಲಾಽಕಾರಿಗಳಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಇಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಬಳಿ ಧರಣಿ ಹಮ್ಮಿಕೊಳ್ಳಲಾಗಿದ್ದು, ಕೂಡಲೇ ಹಕ್ಕು ಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಕೊಳಗೇರಿ ಅಭೀವೃದ್ದಿ ಮಂಡಳಿಯ ಅಽಕಾರಿ ಮಿನಾಕ್ಷಿ ಚೋರಿ ಹಾಗೂ ಪಗಲ್ಲಾ ಧರಣಿಗಾರರ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿ, ಈ ವಿಷಯದ ಕುರಿತು ಹಿರಿಯ ಅಽಕಾರಿಗಳೊಂದಿಗೆ ಚರ್ಚಿಸುವ ಮೂಲಕ ತ್ವರಿತವಾಗಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದರು.
ಮಿನಾಕ್ಷಿ ಕಾಲೇಭಾಗ, ಪಂಡಿತ ಖಂಡಗಳೆ, ಪುಪ್ಪಾ ನೇಗಿನಾಳ, ಕೃಷ್ಣಾ ಜಾಧವ, ಅಕ್ರಂ ಮಾಶ್ಯಾಳಕರ, ದೇವೆಂದ್ರ ಸಕ್ರಿ, ರೇಖಾ ಹಲಸಂಗಿ, ರೇಣುಕಾ ಬೈಚಬಾಳ, ಕೈರುನ ಸುತಾರ, ರಿಯಾನಾ ಮುಲ್ಲಾ, ದುಂಡಪ್ಪ ಸಕ್ರಿ, ಜಾವೀದ ಮುಲ್ಲಾ, ಕಾಮಿನಿ ಕಸಬೆ, ರವಿ ದೊಡಮನಿ, ಮಿನಾಕ್ಷಿ ಸಿಂಗೆ, ರೇಣುಕಾ ಕೋಟ್ಯಾಳ, ಸರೋಜಾ ಕಟ್ಟಿಮನಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net