ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಇಂಡಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಿರಸ್ತೇದಾರ ಎಸ್.ಆರ್. ಮುಜಗೊಂಡರಿಗೆ ಮನವಿ ಸಲ್ಲಿಸಿದರು. ಹನುಮಂತರಾಯಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಿದ್ಧಲಿಂಗ ಹಂಜಗಿ, ಅನಿಲ ಜಮಾದಾರ, ಅನೀಲಗೌಡ ಬಿರಾದಾರ ಇತರರಿದ್ದರು.
ಇಂಡಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಿರಸ್ತೇದಾರ ಎಸ್.ಆರ್. ಮುಜಗೊಂಡರಿಗೆ ಮನವಿ ಸಲ್ಲಿಸಿದರು. ಹನುಮಂತರಾಯಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಿದ್ಧಲಿಂಗ ಹಂಜಗಿ, ಅನಿಲ ಜಮಾದಾರ, ಅನೀಲಗೌಡ ಬಿರಾದಾರ ಇತರರಿದ್ದರು.
Published on
ಇಂಡಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮಂಡಲ ಬಿಜೆಪಿ ವತಿಯಿಂದ
ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಆಡಳಿತ ಸೌಧದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತರಾಯಗೌಡ ಪಾಟೀಲ, ಮುಖಂಡ ಕಾಸುಗೌಡ ಬಿರಾದಾರ, ಸಿದ್ಧಲಿಂಗ ಹಂಜಗಿ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಮಂಜುನಾಥ ದೇವರ ಮಾತನಾಡಿ, ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2400 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ, ರಾಜ್ಯ ಸರ್ಕಾರದವರು ಇನ್ನೂ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ದೂರಿದರು.
ತಾಲೂಕಿನ ಎಲ್ಲ ರಸ್ತೆಗಳೂ ಹಾಳಾಗಿವೆ. ರಸ್ತೆ ನಿರ್ಮಿಸದಿದ್ದರೆ ಕನಿಷ್ಠ ಗುಂಡಿಯನ್ನಾದರೂ ಮುಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸಕ್ಕರೆ ಕಾರ್ಖಾನೆಯವರು ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿದ್ದು, ಜಿಲ್ಲಾಽಕಾರಿಗಳ ನೇತೃತ್ವದಲ್ಲಿ ಕಬ್ಬಿನ ತೂಕ ಪರಿಶೀಲನಾ ಸಮಿತಿ ರಚಿಸಬೇಕಲ್ಲದೆ, ರೈತರು, ಸದಸ್ಯರೂ ಇರಬೇಕು ಎಂದರು.
ವಿದ್ಯುತ್, ಹಾಲು, ರೈತರ ಜಮೀನಿಗೆ ಹಾಕುವ ಟ್ರಾನ್ಸ್-ಚೇರ್ಮರ್ ದರ, ಮುದ್ರಾಂಕ, ಪಹಣಿ, ಜನನ ಮತ್ತು ಮರಣ ಪ್ರಮಾಣ ಪತ್ರ ಸೇರಿ ಹಲವು ದರಗಳನ್ನು ಹೆಚ್ಚಿಸಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಶಂಕರಗೌಡ ಪಾಟೀಲ ಡೊಮನಾಳ, ಮಲ್ಲಿಕಾರ್ಜುನ ಕಿವಡೆ ಮಾತನಾಡಿದರು. ಶಿರಸ್ತೇದಾರ ಎಸ್.ಆರ್. ಮುಜಗೊಂಡರಿಗೆ ಮನವಿ ಸಲ್ಲಿಸಲಾಯಿತು.
ಮೋಹನ ಬರಟಗಿ, ಅದೃಷ್ಟಪ್ಪ ವಾಲಿ, ಯಲ್ಲಪ್ಪ ಹದರಿ, ಸಂತೋಷ ಪಾಟೀಲ, ರಾಚು ಬಡಿಗೇರ, ಭೀಮರಾಯಗೌಡ ಬಿರಾದಾರ, ಮಹಾದೇವ ಗುಡ್ಡೋಡಗಿ, ಶಾಂತು ಕಂಬಾರ, ರಾಮಸಿಂಗ್ ಕನ್ನೊಳ್ಳಿ, ಗಿರಿಮಲ್ಲಪ್ಪಗೌಡ ಬಿರಾದಾರ, ವೀರನಗೌಡ ಬಿರಾದಾರ, ಶಿವಾ ಬಗಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net