ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಇಂಡಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿ, ಶಿರಸ್ತೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.  ಸುನೀಲ ಜಮಖಂಡಿ, ಪ್ರಕಾಶ್ ಬಿರಾದಾರ, ನೇತಾಜಿ ಪವಾರ ಇತರರಿದ್ದರು.
ಇಂಡಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿ, ಶಿರಸ್ತೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು. ಸುನೀಲ ಜಮಖಂಡಿ, ಪ್ರಕಾಶ್ ಬಿರಾದಾರ, ನೇತಾಜಿ ಪವಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿರಸ್ತೇದಾರ ಎಸ್.ಆರ್. ಮುಜಗೊಂಡರಿಗೆ ಮನವಿ
  • ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಹೋರಾಟ
ಇಂಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಇಂಡಿ ಪ್ರಖಂಡ ಸಮಿತಿಯಿಂದ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಶುಕ್ರವಾರ ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿಹಿಂಪ ಜಿಲ್ಲೆಯ ಸಹ ಕಾರ್ಯದರ್ಶಿ ಸುನೀಲ ಜಮಖಂಡಿ, ಜಿಲ್ಲಾ ಪ್ರಮುಖರಾದ ಪ್ರಕಾಶ್ ಬಿರಾದಾರ, ಇಂಡಿ ನಗರ ಘಟಕದ ಅಧ್ಯಕ್ಷ ನೇತಾಜಿ ಪವಾರ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ದುರ್ಮರಣ ನಡೆಯುತ್ತಿದೆ. ಹಿಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಕೂಡಲೇ ಭಾರತ ಸರ್ಕಾರ ಬಾಂಗ್ಲಾ ದೇಶದೊಂದಿಗೆ ಮಾತುಕತೆ ನಡೆಸಿ ಹಿಂದೂಗಳ ಮೇಲಿನ ಹತ್ಯೆ ತಡೆಯಬೇಕು ಎಂದು ಆಗ್ರಹಿಸಿದರು. 
ಬಸವ ಸಮಿತಿ ಅಧ್ಯಕ್ಷ, ಹಿಂದಿನ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ, ಹಿಂದುಗಳನ್ನು ದ್ವಂಸ ಮಾಡಲು ಬಾಂಗ್ಲಾ ದೇಶದಲ್ಲಿ ಮರಣ ಮೃದಂಗ ನಡೆದಿದೆ. ಕೂಡಲೇ ಅಲ್ಲಿನ ಸರ್ಕಾರ ಅದನ್ನು ತಡೆದು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಭಾರತ ಸರ್ಕಾರ ಇದರಲ್ಲಿ ಮಧ್ಯಸ್ಥಿಕೆ ವಹಿಸಿ ಅವರಿಗೆ ಎಚ್ಚರಿಕೆ ನೀಡಬೇಕು. ಹಿಂದೂಗಳ ನಾಶ ತಡೆಯುವ ಕಾರ್ಯವಾಗಬೇಕೆಂದು ಒತ್ತಾಯಿಸಿದರು. 
ವಿಹಿಂಪ ತಾಲೂಕು ಉಪಾಧ್ಯಕ್ಷ ವಿಠ್ಠಲ ಹೊಸಮನಿ, ತಾಲೂಕು ಸಹ ಕಾರ್ಯದರ್ಶಿ ಶಿವರಾಜ ಬಿರಾದಾರ, ಮಲ್ಲಿಕಾರ್ಜುನ ಹಾವಿನಳಮಠ, ಬಸವರಾಜ್ ಕಂಬಾರ, ಬಸವರಾಜ್ ಜಮಖಂಡಿ, ಕೇದಾರ್ ಭೋಜ, ದಯಾನಂದ್ ಪಾಟೀಲ, ರೇವಣಸಿದ್ಧ ಗುಣದಾಳ, ದತ್ತ್ತಾ ಬಂಡೇನವರ, ಸುನೀಲಗೌಡ ಬಿರಾದಾರ, ಪಿಂಟು ಚವಾಣ್, ದಯಾನಂದ ಮೈದರಗಿ, ಸಂಕೇತ್ ಮಹೇಂದ್ರಕರ, ಸಿದ್ದು ಪೂಜಾರಿ, ಸಾಗರ್ ಬಿರಾದಾರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net