ತಡರಾತ್ರಿಯವರೆಗೂ ನಡೆದ ಈ ಹೈಡ್ರಾಮಾ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಚಡಚಣ ಪಿಎಸ್‌ಐ ಸೋಮೇಶ ಗೆಜ್ಜಿ, ಸಿಪಿಐ ಪರಶುರಾಮ ಮನಗೂಳಿ ಅವರು ಮಾತನಾಡಿ, ಜೂ.15 ಸೋಮವಾರ ನಿಮ್ಮ ಚಿನ್ನಕ್ಕೆ ಸರಿಯಾದ ಮೊತ್ತ ನೀಡುತ್ತೇವೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಾರಣ ತಾವು ಸೋಮವಾರದವರೆಗೆ ತಾಳ್ಮೆಯಿಂದ ಇದ್ದು ತಮ್ಮ ಚಿನ್ನದ ಮೊತ್ತವನ್ನು ಪಡೆದುಕೊಳ್ಳಿ ಎಂದು ಹೇಳಿ, ಗ್ರಾಹಕರ ಮನವೊಲಿಸುವಲ್ಲಿ ಯಶಸ್ವಿಯಾದ ನಂತರ ಗ್ರಾಹಕರು ಪ್ರತಿಭಟನೆ ಹಿಂಪಡೆದರು.