ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಆನ್‌ಲೈನ್‌ನಲ್ಲಿ 1979 ಮತದಾರರು ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ. 11 ಮತದಾರರು ಸಂಗ್ರಹಿಸಲಾಗದ ಅಥವಾ ಗೈರುಹಾಜರಾದವರಿದ್ದಾರೆ. ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು 468, ಮರಣ ಹೊಂದಿರುವ ಮತದಾರರು 867, ಈಗಾಗಲೇ ನೋಂದಾಯಿಸಿಕೊಂಡ ಮತದಾರರು 730 ಮತ್ತು ಇತರೆ 69 ಮತದಾರರಿದ್ದಾರೆ ಎಂದು ಪ್ರಗತಿಯ ವಿವರ ನೀಡಿದರು.