ಕಳೆದ 10 ವರ್ಷದ ಪ್ರಗತಿ ವಿವರ ಬಹಿರಂಗ, ಸಾಧನೆ ಪ್ರಶ್ನಿಸುವವರಿಗೆ ಸಂಸದ ರಮೇಶ ಜಿಗಜಿಣಗಿ ಖಡಕ್ ಉತ್ತರ

ರಮೇಶ ಜಿಗಜಿಣಗಿ, ಸಂಸದ
ರಮೇಶ ಜಿಗಜಿಣಗಿ, ಸಂಸದ
Published on

ಪ್ರಮುಖ ಮುಖ್ಯಾಂಶಗಳು

  • ಸರ್ವತೋಮುಖ ಅಭಿವೃದ್ಧಿಗೆ ನಾಂದಿ
  • ರೂ.3516.67 ಕೋಟಿ ರೂ.ವೆಚ್ಚ
  • 1000.69 ಕಿಮೀ ರಸ್ತೆ ಕಾಮಗಾರಿ
  • ರೈಲ್ವೆ-ಮೇಲ್ವೇತುವೆಗಳ ನಿರ್ಮಾಣ
ವಿಜಯಪುರ: ‘ಕಳೆದ 10 ವರ್ಷಗಳಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮೇಲ್ಸೇತುವೆ ಸೇರಿ ವಿವಿಧ 3516.67 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ವಿಜಯಪುರದ ರಾಷ್ಟ್ರೀಯ ಹೆದ್ದಾರಿ ವಿಭಾಗದ ವ್ಯಾಪ್ತಿಯಡಿ 4 ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅಂದಾಜು 1668.88 ಕೋಟಿ ರೂ.ಅನುದಾನದಡಿ ಒಟ್ಟು 208.04 ಕಿಮೀ ಉದ್ದದಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಎರಡು ರೈಲ್ವೆ ಸೇತುವೆ ಸಹ ಒಳಗೊಂಡಿದೆ.
ಕೇಂದ್ರ ರಸ್ತೆ ನಿಧಿ ಯೋಜನೆಯಡಿ 2016-17 ಸಾಲಿನಲ್ಲಿ ಸುಮಾರು 14 ಕಾಮಗಾರಿಗಳು ಮಂಜುರಾಗಿದ್ದು, ಒಟ್ಟು ಉದ್ದ 60 ಕಿಮೀ ಹಾಗೂ ಅದರ ಮೊತ್ತ 72 ಕೋಟಿ ರೂ.ಗಳಷ್ಟಿದೆ. ಇದರಲ್ಲಿ 2 ಸೇತುವೆಗಳನ್ನು ಒಳಗೊಂಡಿದ್ದು ಎಲ್ಲ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ ಎಂದು ಸಂಸದರು ತಿಳಿಸಿದ್ದಾರೆ.
ಕೇಂದ್ರ ರಸ್ತೆ ಯೋಜನೆಯಡಿ 2023-24 ಸಾಲಿನಲ್ಲಿ ಸುಮಾರು 10 ಕಾಮಗಾರಿಗಳು ಮಂಜುರಾಗಿದ್ದು, ಒಟ್ಟು ಉದ್ದ 81 ಕಿಮೀ ಉದ್ದ ಹಾಗೂ ಅದರ ಮೊತ್ತ 48 ಕೋಟಿ ಇರುತ್ತದೆ. ಕಾಮಗಾರಿಗಳು ಭೌತಿಕವಾಗಿ ಮುಕ್ತಾಯಗೊಂಡಿವೆ. ಕೇಂದ್ರ ರಸ್ತೆ ಯೋಜನೆಯಡಿ 2025-26 ಸಾಲಿನಲ್ಲಿ ಸುಮಾರು 9 ಕಾಮಗಾರಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಈಗಾಗಲೇ ಮಂಜೂರಾತಿ ಸಿಕ್ಕಿದೆ. ಒಟ್ಟು ಉದ್ದ 80.76 ಕಿಮೀ ಹಾಗೂ ಅದರ ಮೊತ್ತ 54 ಕೋಟಿ ಇರುತ್ತದೆ ಎಂದವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಟ್ಟು 2 ಕಾಮಗಾರಿಗಳು ಕೈಗೊಂಡಿದ್ದು ವಿಜಯಪುರದಿಂದ ಸೋಲಾಪುರದವರಗೆ ಹಾಗೂ ಮೋರಟಗಿಯಿಂದ ಆಲಮಟ್ಟಿಯವರಗೆ ಒಟ್ಟು ಉದ್ದ 200 ಕಿಮೀ ಹಾಗೂ ಅದರ ಮೊತ್ತ 1700 ಕೋಟಿಗಳಿದ್ದು, ಕಾಮಗಾರಿಗಳು ಮುಕ್ತಾಯಗೊಂಡಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಟ್ಟು 2 ಕಾಮಗಾರಿಗಳ ವಿಜಯಪುರದಿಂದ ಹುಬ್ಬಳ್ಳಿವರೆಗೆ ಹಾಗೂ ವಿಜಯಪುರದಿಂದ ಕಲಬುರಗಿವರೆಗೆ ಅಂದಾಜು 348 ಕಿಮೀ ಹಾಗೂ ಅದರ ವಿಸ್ತೃತ ಯೋಜನಾವರದಿ ತಯಾರಿಸಲು ಸಂಯೋಜಕರನ್ನು ನೇಮಿಸಲಾಗಿದೆ.ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರೂ.27.79 ಕೋಟಿ ವೆಚ್ಚದಡಿ 451.45 ಕಿಮೀ ಉದ್ದದ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ.
ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ 1000.69 ಕಿಮೀ ರಸ್ತೆ ಹಾಗೂ 2 ರೈಲ್ವೆ-ಮೇಲ್ವೇತುವೆಗಳನ್ನು, 3516.67 ಕೋಟಿ ರೂ. ಅನುದಾನದಡಿ ಕಾಮಗಾರಿ ಕೈಗೊಳ್ಳಲಾಗಿದೆ. ಇದಷ್ಟೇ ಅಲ್ಲ ಇಂಥ ಅನೇಕ ಬೃಹತ್ ಕಾಮಗಾರಿಗಳು ಹಾಗೂ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸಂಸದರ ಸಾಧನೆ ಏನು ಎಂದು ಪದೇ ಪದೇ ಪುಕಾರು ಎಬ್ಬಿಸುವವರು, ಗಂಟಲಿಗೆ ತ್ರಾಸ್ ಕೊಟ್ಟುಕೊಳ್ಳುವವರು ಈ ಸಾಧನೆಯನ್ನೊಮ್ಮೆ ಕಣ್ತುಂಬಿಸಿಕೊಳ್ಳಬೇಕಿದೆ ಎಂದು ಸಂಸದರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net