ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ

ಸಿಂದಗಿ ನಗರದದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಉದ್ಘಾಟಿಸಿದರು. ಶಾಸಕ ಅಶೋಕ ಮನಗೂಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಚಂದ್ರಶೇಖರ ನುಗ್ಲಿ, ರವಿ ಬಿರಾದಾರ ಮತ್ತಿತರರಿದ್ದರು.
ಸಿಂದಗಿ ನಗರದದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಉದ್ಘಾಟಿಸಿದರು. ಶಾಸಕ ಅಶೋಕ ಮನಗೂಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಚಂದ್ರಶೇಖರ ನುಗ್ಲಿ, ರವಿ ಬಿರಾದಾರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ
  • ನೂತನ ಪ್ರೌಢಶಾಲೆಗಳ ಉದ್ಘಾಟನಾ ಸಮಾರಂಭ
ಸಿಂದಗಿ : ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದು ಹಂತ ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆವರಣದಲ್ಲಿ ಬುಧವಾರ ನೂತನ 50 ಲಕ್ಷ ರೂ. ವೆಚ್ಚದ ಶಿಕ್ಷಕರ ಭವನ ನಿರ್ಮಾಣ ಹಾಗೂ 8 ಪ್ರೌಢಶಾಲೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರ ಸಂಘಟನಾತ್ಮಕ ಶಕ್ತಿಗೆ ಸರಕಾರ ಸ್ಪಂದಿಸುತ್ತಿದೆ. ಶಿಕ್ಷಕರು, ಮಕ್ಕಳ ಶಿಕ್ಷಣಕ್ಕೆ ಅಗತ್ಯ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಪರೀಕ್ಷಾ ಪ್ರಗತಿಯತ್ತ ಗಮನ ಹರಿಸಬೇಕು. ಶಾಲೆ ಅವಧಿ ಮುಗಿದ ನಂತರವೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಶೈಕ್ಷಣಿಕ ಪ್ರಗತಿ ಹೊಂದಬೇಕು. ಮುಂಬರುವ ಬಜೆಟ್‌ನಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಗುಣಾತ್ಮಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲು ನಿಗದಿಪಡಿಸಲಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಒದಗಿಸಲು 57ಲಕ್ಷ ರೂ. ಸರ್ಕಾರ ಖರ್ಚು ಮಾಡುತ್ತಿದೆ ಎಂದರಲ್ಲದೆ, ಶಾಸಕರ ಬೇಡಿಕೆಯಂತೆ ಕೋರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡಲಾಗಿದೆ ಎಂದರು.
ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಂದಗಿ, ದೇವರಹಿಪ್ಪರಗಿ ಹಾಗೂ ಆಲಮೇಲದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಕಟ್ಟಡಕ್ಕೆ ಸಚಿವರು ಮನಸ್ಸು ಮಾಡಬೇಕಲ್ಲದೆ, ಮತಕ್ಷೇತ್ರದ ಶಾಲೆಗಳಿಗೆ ಅಗತ್ಯ ಅನುದಾನ ಒದಗಿಸಬೇಕೆಂದು ಮನವಿ ಮಾಡಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಲಿ ಮಾತನಾಡಿ, ಸರ್ಕಾರ ಶಿಕ್ಷಕರನ್ನು ಅನ್ಯ ಕೆಲಸಗಳಿಂದ ಮುಕ್ತಗೊಳಿಸಬೇಕು. ರಾಜ್ಯದ 1 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ವಂಚಿತರಾದವರಿಗೆ ನ್ಯಾಯ ಒದಗಿಸಬೇಕು. 8 ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಗ್ರಾಮೀಣ ಕೃಪಾಂಕ ಜಾರಿಗೊಳಿಸಿ ಡಿಜಿಟಲ್ ಶಾಲೆ ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸಬೇಕೇಂದು ಆಗ್ರಹಿಸಿದರು.
ಡಿಡಿಪಿಐ ವಿ.ವಿ. ಸಾಲಿಮಠ, ಉಮಾದೇವಿ ಸೊನ್ನದ, ಶ್ರೀಶೈಲ ಕವಲಗಿ, ಅಶೋಕ ಕೊಳಾರಿ, ಸುರೇಶ ಶಡಶ್ಯಾಳ, ಆನಂದ ಭೂಸನೂರ, ಅಶೋಕ ತೆಲ್ಲೂರ, ಎ.ಎಚ್. ವಾಲಿಕಾರ, ಶಿವರಾಜ ಬಿರಾದಾರ, ಆರ್.ಎಚ್. ಬಿರಾದಾರ, ಅಲ್ಲಾಭಕ್ಷ ವಾಲಿಕಾರ, ಅರ್ಜುನ ಲಮಾಣಿ ಇತರರಿದ್ದರು.

ಇದರಲ್ಲಿ ನನ್ನ ಪ್ರತಿಷ್ಠೆ ಏನೂ ಇಲ್ಲ

ಹಿಂದಿನ ಅವಧಿಯಲ್ಲಿ ಶಿಕ್ಷಕರ ಭವನದ ಕಾಮಗಾರಿಗೆ 50 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಕಾಮಗಾರಿಯ ಗುತ್ತಿಗೆದಾರ ಹಾಗೂ ಶಿಕ್ಷಕರ ಸಂಘದ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ ಕಾಮಗಾರಿ ಆರಂಭಿಸಲು ಸೂಚಿಸಲಾಗಿತ್ತು. ಆದರೆ, ಅದು ಆರಂಭವಾಗಿರಲಿಲ್ಲ. ಮಾಜಿ ಶಾಸಕರು ಕಡಿಮೆ ಅಳತೆಯಲ್ಲಿ ಭವನ ನಿರ್ಮಿಸಲು ಹೇಗೆ ಸಾಧ್ಯ ಎಂದು ಮನಗಂಡು ಕಟ್ಟಡದ ಅಳತೆ ಹೆಚ್ಚಿಸಿ, ಮೊದಲ ಹಂತದ ಕಾಮಗಾರಿಗೆ ಸಚಿವರು ಶಿಲಾನ್ಯಾಸ ಮಾಡಿದ್ದಾರೆ. ಮುಂದಿನ ಹಂತಕ್ಕೆ ಅಂದಾಜು 1 ಕೋಟಿ ರೂಗಳಿಂದ ಹೆಚ್ಚುವರಿ 50 ಲಕ್ಷ ರೂ. ಹೆಚ್ಚಿನ ಅನುದಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು. ಶಿಕ್ಷಕರ ಕ್ಷೇತ್ರದ ಸೇವೆ ಮಾಡುತ್ತಿರುವೆ ವಿನಃ ಮಾಜಿ ಶಾಸಕರ ಅರೋಪದಂತೆ ಇದರಲ್ಲಿ ನನ್ನ ರಾಜಕಾರಣವಿಲ್ಲ ಎಂದು ಭೂಸನೂರ ಆರೋಪಕ್ಕೆ ಶಾಸಕ ಅಶೋಕ ಮನಗೂಳಿ ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net