ದನಕರುಗಳ ಆರೋಗ್ಯ ರಕ್ಷಣೆಗೆ ಆದ್ಯತೆ

ಬಸವನಬಾಗೇವಾಡಿ ತಾಲೂಕು ಪಶು ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೯ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಗೋ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ತಾಪಂ ಇಒ ವೆಂಕಟೇಶ ವಂದಾಲ ಚಾಲನೆ ನೀಡಿದರು. ಡಾ.ಪಂಚಾಕ್ಷರಿ ಸಂಕ, ಡಾ.ಬಸವರಾಜ ಕನಮಡಿ, ಡಾ. ರೇವಣಸಿದ್ದು ದಗಿನಾಳ, ಡಾ.ಎಸ್.ಎನ್ ಹಾದಿಮನಿ, ಆರ್.ಎಸ್.ಹಿರೇಮಠ ಇತರರಿದ್ದರು.
ಬಸವನಬಾಗೇವಾಡಿ ತಾಲೂಕು ಪಶು ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೯ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಗೋ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ತಾಪಂ ಇಒ ವೆಂಕಟೇಶ ವಂದಾಲ ಚಾಲನೆ ನೀಡಿದರು. ಡಾ.ಪಂಚಾಕ್ಷರಿ ಸಂಕ, ಡಾ.ಬಸವರಾಜ ಕನಮಡಿ, ಡಾ. ರೇವಣಸಿದ್ದು ದಗಿನಾಳ, ಡಾ.ಎಸ್.ಎನ್ ಹಾದಿಮನಿ, ಆರ್.ಎಸ್.ಹಿರೇಮಠ ಇತರರಿದ್ದರು.
Published on
ಬಸವನಬಾಗೇವಾಡಿ: ತಾಲೂಕಿನ ರೈತಾಪಿ ಜನರು ತಮ್ಮ ದನಕರುಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿ ವೆಂಕಟೇಶ ವಂದಾಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ತಾಲೂಕು ಪಶು ಆಸ್ಪತ್ರೆ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೯ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಗೋ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ತಮ್ಮ ದನಕರುಗಳನ್ನು ಸುರಕ್ಷಿಸುವುದರ ಜತೆಗೆ ಅವುಗಳಿಗೆ ಯಾವುದೇ ರೀತಿ ರೋಗಗಳು ಬಾರದ ರೀತಿಯಲ್ಲಿ ರಕ್ಷಣೆ, ಪಾಲನೆ, ಪೋಷಣೆಮಾಡಿ ಬೇಸಾಯ ಕೆಲಸಗಳಿಗೆ ಉಪಯೋಗಿಸಿ ಅವುಗಳ ಸಂತಾನೋತ್ಪತ್ತಿ ಸಂಖ್ಯೆ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದರು.
ಪಶು ಪಾಲನ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪಂಚಾಕ್ಷರಿ ಸಂಕ ಮಾತನಾಡಿ, ತಾಲೂಕಿನಾದ್ಯಂತ ಏ.೨೩ರಿಂದ ಮೇ ೨೨ರವರೆಗೆ ಕಾಲು ಬಾಯಿ ಜ್ವರ ರೋಗದ ವಿರುದ್ಧ ಲಸಿಕೆ ಹಾಕಲು ೮ ತಂಡಗಳನ್ನು ರಚಿಸಲಾಗಿದೆ. ತಾಲೂಕಿನಲ್ಲಿ ಒಟ್ಟು ೧೮೯೩೪ ಜಾನುವಾರು ನೋಂದಣಿಯಾಗಿರುತ್ತವೆ. ವರ್ಷದಲ್ಲಿ ಎರಡು ಬಾರಿ ಪ್ರತಿ ಗ್ರಾಮದ ಮನೆ ಮನೆಗೂ ತೆರಳಿ ರಾಸುಗಳಿಗೆ ಲಸಿಕೆ ಹಾಕಲಾಗುತ್ತದೆ ಎಂದು ಹೇಳಿದರು.
ತಾಲೂಕಿನಾದ್ಯಂತ ೩೫ ಸಿಬ್ಬಂದಿ ಲಸಿಕೆಗೆ ನೇಮಿಸಲಾಗಿದ್ದು, ತಾಲೂಕಿನಲ್ಲಿ ಒಟ್ಟು ೨೦೯ ಬ್ಲಾಕ್‌ಗಳಿದ್ದು ಪ್ರತಿ ಬ್ಲಾಕಿಗೆ ೮೫-೧೦೦ ಜಾನುವಾರುಗಳಿದ್ದು ಅವುಗಳಿಗೆ ಉಚಿತ ಲಸಿಕೆ ಹಾಕಲಾಗುವದು. ಒಂದು ವೇಳೆ ಲಸಿಕೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಔಷಧಿಗಳನ್ನು ಸಂಬಂಧಿಸಿದ ಲಸಿಕಾ ತಂಡದ ಮುಖ್ಯಸ್ತರಿಗೆ ನೀಡಲಾಗಿದೆ. ರೈತರು ತಮ್ಮ ದನ ಕರುಗಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಲು ಸಹಕರಿಸಬೇಕೆಂದು ಎಂದು ಹೇಳಿದರು.
ಡಾ. ಬಸವರಾಜ ಕನಮಡಿ, ಮುಖ್ಯಪಶು ವೈದ್ಯಾಧಿಕಾರಿ ಡಾ.ರೇವಣಸಿದ್ದು ದಗಿನಾಳ, ಪಶು ವೈದ್ಯಾಧಿಕಾರಿ ಡಾ.ಎಸ್.ಎನ್ ಹಾದಿಮನಿ, ಪಶು ವೈದ್ಯಾಧಿಕಾರಿ ಆರ್.ಎಸ್. ಹಿರೇಮಠ, ಎಂ.ಬಿ.ಗಣಿ, ಕಿರಿಯ ಪಶು ವೈದ್ಯಪರೀಕ್ಷಕಿ ಕೆ.ಎ.ಚಪ್ಪರಬಂದ, ಕಿರಿಯ ಪಶು ವೈದ್ಯ ಪರೀಕ್ಷಕಿ ಸರೋಜಿನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net