ಧೃಢ ಸಂಕಲ್ಪದಿAದ ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸಿ

ವಿಜಯಪುರದ ಆರ್‌ಕೆಎಂ ಪಿಯು ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗಾಗಿ ಸಿಇಟಿ/ನೀಟ್ ಕೌನ್ಸಲಿಂಗ್ ಜಾಗೃತಿ ಕಾರ್ಯಕ್ರಮ ನಡೆಯಿತು.
ವಿಜಯಪುರದ ಆರ್‌ಕೆಎಂ ಪಿಯು ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗಾಗಿ ಸಿಇಟಿ/ನೀಟ್ ಕೌನ್ಸಲಿಂಗ್ ಜಾಗೃತಿ ಕಾರ್ಯಕ್ರಮ ನಡೆಯಿತು.
Published on
ವಿಜಯಪುರ: ಇತ್ತೀಚಿಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬAಽತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಧೈರ್ಯ ಕಳೆದುಕೊಳ್ಳದೇ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು.
ಈ ಸಂಕಷ್ಟ ಸಂದರ್ಭವನ್ನು ಒಂದು ಅವಕಾಶವಾಗಿ ಪರಿಗಣಿಸುವ ಮೂಲಕ ಮುಂಬರುವ ಜೂನ್‌ನಲ್ಲಿ ನಡೆಯಲಿರುವ ನೀಟ್ ಮರುಪರೀಕ್ಷೆಗೆ ಸಮರ್ಪಕವಾಗಿ ಸಿದ್ಧತೆ ನಡೆಸಬೇಕು ಎಂದು ಆರ್‌ಕೆಎಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಬುಲಿAಗಯ್ಯ ಕರ್ಪೂರಮಠ ಹೇಳಿದರು.
ನಗರದ ಆರ್‌ಕೆಎಂ ಪಿಯು ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಸಹಯೋಗದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಿಇಟಿ/ನೀಟ್ ಕೌನ್ಸಲಿಂಗ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ರಾಜಕೀಯವಾಗಿ ಚರ್ಚಿಸುವುದಕ್ಕೂ ಮತ್ತು ಅದರ ಬಗ್ಗೆ ಅನಾವಶ್ಯಕ ಚಿಂತನೆ ಮಾಡಿಕೊಳ್ಳುವುದಕ್ಕೂ ಮನಸ್ಸಿನಲ್ಲಿ ಅಲ್ಪ ಪ್ರಮಾಣದ ಜಾಗ ಕೂಡ ವಿದ್ಯಾರ್ಥಿಗಳು ನೀಡಬಾರದು. ಸತತ ಅಧ್ಯಯಯನ ಕೈಗೊಳ್ಳುವ ಮೂಲಕ ಧೃಢ ಸಂಕಲ್ಪದೊAದಿಗೆ ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸಿ ಯಶಸ್ವಿಯಾಗಬೇಕು ಎಂದು ಶುಭ ಹಾರೈಸಿದರು.
ಸಂಪನ್ಮೂಲ ವ್ಯಕಿ ಕೆ. ಮುರಳೀಧರ ಮಾತನಾಡಿ, ಅವರು ಸಿಇಟಿ/ನೀಟ್ ಸೀಟ್ ಆಯ್ಕೆ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮಾರ್ಗದರ್ಶನ ನೀಡಿದರು. ಅಲ್ಲದೇ, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿಧಾನ, ಕಳೆದ ವರ್ಷದ ಕಟ್ ಆ-ï ವಿವರಗಳು ಹಾಗೂ ಸೀಟ್ ಆಯ್ಕೆ ಸಮಯದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳ ಕುರಿತು ಅವರು ಮಾಹಿತಿ ನೀಡಿದರು.
ಪ್ರಾಚಾರ್ಯೆ ಮೇಧಾ ಕರ್ಪೂರಮಠ, ಸಂಯೋಜಕ ಪ್ರಣೀತಕುಮಾರ ಮತ್ತಿತರರಿದ್ದರು. ಜಾಗೃತಿ ಕಾರ್ಯಕ್ರಮದಲ್ಲಿ 200ಕ್ಕೂ ಅಽಕ ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net