ಚವಡಿಹಾಳ ಕಾಲುವೆಯಲ್ಲಿ ಹೂಳೆತ್ತುವ ಸ್ಥಳಕ್ಕೆ ಪ್ರಕಾಶ ಭೇಟಿ
ಇಂಡಿ ತಾಲೂಕಿನ ಚವಡಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವಡಿಹಾಳ ಗ್ರಾಮದ ಮಹಾದೇವ ತೊಂಡಿಕಟ್ಟಿ ಇವರ ಹೊಲದ ಹತ್ತಿರ ಕಾಲುವೆಯಲ್ಲಿ ನಡೆಯುತ್ತಿರುವ ಹೂಳೆತ್ತುವ ಸ್ಥಳಕ್ಕೆ ಜಿ.ಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಭೇಟಿ ನೀಡಿ ಪರಿಶೀಲಿಸಿದರು. ಮಹಾದೇವಪ್ಪ ಏವೂರ,ಸಂಜಯ ಖಡಗೇಕರ, ಸಿದರಾಯ ಬಿರಾದಾರ ಮತ್ತಿತರರಿದ್ದಾರೆ.
Published on:
Copied
Follow Us
ಇಂಡಿ: ತಾಲೂಕಿನ ಚವಡಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವಡಿಹಾಳ ಗ್ರಾಮದ ಮಹಾದೇವ ತೊಂಡಿಕಟ್ಟಿ ಇವರ ಹೊಲದ ಹತ್ತಿರ ಕಾಲುವೆಯಲ್ಲಿ ನಡೆಯುತ್ತಿರುವ ಹೂಳೆತ್ತುವ ಸ್ಥಳಕ್ಕೆ ಜಿ.ಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿ ಎನ್‌ಎಂಎಂಎಸ್ ಫೇಸ್ ಅಥೆಂಟಿಕೇಶನ್ ಆಧಾರಿತವಾಗಿ ಹಾಜರಾತಿ ಕುರಿತು ಪರಿಶೀಲಿಸಿದರು.
ಕೂಲಿಕಾರರ ಮುಖ ಗುರುತಿಸುವುದಕ್ಕೆ ತಂತ್ರಜ್ಞಾನ ಬಳಸಿ ಕಾರ್ಮಿಕರ ನಿಖರವಾದ ಮಾಹಿತಿ ಪಡೆದುಕೊಂಡರು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಕಲ್ಪಿಸುವ ಕುರಿತು ಖಾತ್ರಿ ಪಡಿಸಿದರು. ನಂತರ ಕೂಲಿಕಾರರ ಜತೆ ಸಂವಾದ ಬೆಳೆಸಿ ಅವರ ಕುಂದು ಕೊರತೆ ಚರ್ಚಿಸಿದರು. ಬಿಸಿಲಿನ ತಾಪಕ್ಕೆ ಎಲ್ಲರೂ ಬೆಳಗ್ಗೆ ೬ಕ್ಕೆ ಬಂದು ೧೨ರವರೆಗೆ ಕೆಲಸ ಮಾಡಲು ತಿಳಿಸಿದರು.
ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಮಾತನಾಡಿ, ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಕೂಲಿಕಾರರು ಕೆಲಸಕ್ಕೆ ಬರುವವರಿಗೆ ಎನ್‌ಎಂಆರ್ ತೆಗೆಯಿಸುವಂತೆ ಮತ್ತು ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲು ಗ್ರಾ.ಪಂ ಪಿಡಿಒ ಸಿದರಾಯ ಬಿರಾದಾರ ಅವರಿಗೆ ಸೂಚಿನೆ ನೀಡಿದರು.
ಸಹಾಯಕ ನಿರ್ದೇಶಕ ಸಂಜಯ ಖಡಗೇಕರ, ಪಿಡಿಒ ಸಿದರಾಯ ಬಿರಾದಾರ, ತಾಂತ್ರಿಕ ಸಂಯೋಜಕ ಶಿವರಾಜ ಬಿರಾದಾರ, ವಿನೋದ ಸಜ್ಜನ, ರಾಮಗೌಡ ಸರಬಡಗಿ, ಬಾಬು ನಾಯಕ, ಸಂಗಮೇಶ ಬಿರಾದಾರ, ಶ್ರೀಕಾಂತ ಮತ್ತಿತರಿದ್ದರು.