

ಪ್ರಮುಖ ಮುಖ್ಯಾಂಶಗಳು
ಹಿರೇಮಸಳಿಯ ರಸ್ತೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಗುತ್ತಿಗೆದಾರರು ಬಿಲ್ ಸಲ್ಲಿಸುತ್ತಾರೆ. ಎರಡು ತಿಂಗಳಿಗೊಮ್ಮ ಇಲಾಖೆಯ ಸಿಬ್ಬಂದಿ ರಸ್ತೆಯ ಗುಣಮಟ್ಟ ಪರಿಶೀಲಿಸುತ್ತಾರೆ. ಹಿರೇಮಸಳಿ ರಸ್ತೆ ಹಾಳಾಗಿದ್ದು ನಿಜ. ಈ ಕುರಿತು ಗುತ್ತಿಗೆದಾರನಿಗೆ ನೋಟಿಸಲ್ ನೀಡಲಾಗಿದೆ. ಬಿಲ್ ಪಾವತಿ ಮಾಡಿಲ್ಲ. ನಿರ್ವಹಣೆ ಮಾಡಲು ತಿಳಿಸಲಾಗಿದೆ. ಶೀಘ್ರದಲ್ಲೇ ದುರಸ್ಥಿಗೊಳಿಸಲಾಗುವುದು.
ಇಡೀ ರಸ್ತೆ ಹಾಳಾಗಿದೆ. ಸಂಬಂಧಿಸಿದ ಅಧಿಕಾರಿಗಳು ಯಾರೊಬ್ಬರೂ ಈ ಕುರಿತು ಕ್ರಮ ಕೈಗೊಂಡಿಲ್ಲ. ಜನ ತೀವ್ರ ಹೈರಾಣಾಗುತ್ತಿದ್ದಾರೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು. ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ.