ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನತೆ

ಇಂಡಿ ತಾಲೂಕಿನ ಅಗರಖೇಡ ಗ್ರಾಮಗಳಲ್ಲಿರುವ ನಲ್ಲಿಗಳಲ್ಲಿ ನೀರಿಗಾಗಿ ಕಾಯುತ್ತಿರುವ ಗ್ರಾಮಸ್ಥರು.
ಇಂಡಿ ತಾಲೂಕಿನ ಅಗರಖೇಡ ಗ್ರಾಮಗಳಲ್ಲಿರುವ ನಲ್ಲಿಗಳಲ್ಲಿ ನೀರಿಗಾಗಿ ಕಾಯುತ್ತಿರುವ ಗ್ರಾಮಸ್ಥರು.
Published on

ಪ್ರಮುಖ ಮುಖ್ಯಾಂಶಗಳು

  • 38 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಸ್ಯೆ
  • ಬಿಲ್ ಪಾವತಿಸುವವರೆಗೂ ನೀರು ಬಿಡಲ್ಲ ಎನ್ನುತ್ತಿರುವ ಗುತ್ತಿಗೆದಾರರು
ಉಮೇಶ ಬಳಬಟ್ಟಿ ಇಂಡಿ
ತಾಲೂಕಿನ 38 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮದಲ್ಲೂ ಕುಡಿಯುವ ನೀರಿನ ತೊಂದರೆ ಉದ್ಭವಿಸಿದ್ದು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ಗ್ರಾಮಗಳಿಗೆ ಜಲಜೀವನ್ ಮಿಷಿನ್ ಯೋಜನೆಯಡಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ, ವಾರದಿಂದ ನೀರು ಪೂರೈಕೆಯಾಗದೆ ಗ್ರಾಮಸ್ಥರು ಪರದಾಡುವಂತಾಗಿದೆ. ಸಂಬಂಧಿಸಿದವರಿಗೆ ಕಾರಣ ಕೇಳಿದರೆ ಜಲಜೀವನ್ ಮಿಷಿನ್ ಅಡಿಯಲ್ಲಿ ನೀರು ಸರಬರಾಜು ಮಾಡುವ ಟೆಂಡರುದಾರರಿಗೆ ಆರು ತಿಂಗಳಿಂದ ಬಿಲ್ ಪಾವತಿಯಾಗದ್ದರಿಂದಾಗಿ ಅವರು ನೀರು ಬಿಡುವುದನ್ನು ಸ್ಥಗಿತಗೊಳಿಸಿದ್ದಾರೆ. ನೀರು ಪೂರೈಸುವ ಕೆರೆ, ಬೋರ್‌ವೆಲ್ ಹಾಗೂ ಇತರೆ ನೀರಿನ ಮೂಲಗಳಲ್ಲಿ ಸಾಕಷ್ಟು ನೀರಿದ್ದರೂ ಟೆಂಡರುದಾರರು ಹಣ ಬಿಡುಗಡೆಯಾಗುವವರೆಗೂ ನೀರು ಪೂರೈಸುತ್ತಿಲ್ಲ ಎಂದು ತಿಳಿಸುತ್ತಾರೆ.
ಈ ಕುರಿತು ನೀರು ಪೂರೈಸುವ ಗುತ್ತಿಗೆದಾರರನ್ನು ಕೇಳಿದರೆ ತಾಪಂ, ಜಿಪಂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಗುತ್ತಿಗೆದಾರರು ಸೇರಿ ರಾಜ್ಯಮಟ್ಟದಲ್ಲಿ ಪ್ರತಿಭಟಿಸಲು ನಿರ್ಧರಿಸಿದ್ದರೂ ಹಣ ಬಿಡುಗಡೆ ಮಾಡುವ ಸೂಚನೆ ಕಂಡು ಬಂದಿಲ್ಲ. ಹೀಗಾಗಿ ಗ್ರಾಮಗಳ ಜನತೆ ಇನ್ನೂ ಎಷ್ಟು ದಿನ ನೀರಿಲ್ಲದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಲು ಬಾರದಂತಾಗಿದೆ.

ವಾರದಿಂದ ಜೆಜೆಎಂ ನೀರು ಸ್ಥಗಿತಗೊಂಡಿದ್ದು ನಿಜ. ಗುತ್ತಿಗೆದಾರರಿಗೆ ಬಿಲ್ ಜಮಾ ಆಗಿಲ್ಲ. ಹೀಗಾಗಿ ಅವರು ನೀರು ಬಿಡುತ್ತಿಲ್ಲ. ನಾವು ಅವರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ಈಗಾಗಲೇ ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಈ ಕುರಿತು ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎಚ್. ಕನ್ನೂರ ಅವರನ್ನು ಸಂಪರ್ಕಿಸಿದಾಗ ಗುತ್ತಿಗೆದಾರರಿಗೆ ಸರ್ಕಾರದಿಂದ ಪಾವತಿಸಬೇಕಾದ ಬಿಲ್ ಪಾವತಿಯಾಗದ ಕಾರಣ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮ ವಾರ್ಡ್ ನಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಬಂದಿಲ್ಲ. ಈ ಕುರಿತು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಇರುವ ಕಡೆ ಬೋರ್‌ವೆಲ್ ಕೊರೆಯಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net