ಜಾನುವಾರು ಜಾತ್ರೆ ಅಚ್ಚುಕಟ್ಟಾಗಿ ಆಯೋಜಿಸಿ

ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಽಕಾರಿ ಡಾ. ಆನಂದ ಕೆ.  ಅಽಕಾರಿಗಳ ಸಭೆ ನಡೆಸಿದರು. ಅಽಕಾರಿಗಳಾದ ಅಶೋಕ ಗೋಣಸಗಿ, ಶಶಿಧರ ನೀಲಗರ ಮತ್ತಿತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಽಕಾರಿ ಡಾ. ಆನಂದ ಕೆ. ಅಽಕಾರಿಗಳ ಸಭೆ ನಡೆಸಿದರು. ಅಽಕಾರಿಗಳಾದ ಅಶೋಕ ಗೋಣಸಗಿ, ಶಶಿಧರ ನೀಲಗರ ಮತ್ತಿತರರಿದ್ದಾರೆ.
Published on
ವಿಜಯಪುರ: ಸಂಕ್ರಮಣದ ಹಿನ್ನೆಲೆ ಜ. 10ರಿಂದ 17ರವರೆಗೆ ಸಿದ್ಧೇಶ್ವರ ಜಾನುವಾರು ಜಾತ್ರೆ ನಡೆಯಲಿದ್ದು, ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಽಕಾರಿ ಡಾ. ಆನಂದ ಕೆ. ಅವರು ಸಂಬAಽಸಿದ ಅಽಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ಪೂರ್ವಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿ ಭಾಗವಾಗಿರುವುದರಿಂದ ಜಾನುವಾರು ಜಾತ್ರೆಗೆ ಮಹಾರಾಷ್ಟç ಸೇರಿ ವಿವಿಧ ರಾಜ್ಯಗಳಿಂದ ರೈತರು ಜಾನುವಾರು ಸಮೇತ ಆಗಮಿಸಲಿದ್ದಾರೆ.
ಹೀಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಒಂದು ವಾರಗಳ ಕಾಲಕ್ಕೂ ಹೆಚ್ಚಿನ ದಿನ ಜಾತ್ರೆ ನಡೆಯುವುದರಿಂದ ಸಮರ್ಪಕ ವಿದ್ಯುತ್ ವ್ಯವಸ್ಥೆ ಸೇರಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಮುಂಚಿತವಾಗಿ ಔಷಧ ಸಿಂಪಡಿಸಲು ಅಗತ್ಯ ಕ್ರಮವಹಿಸಬೇಕು. ಜಾತ್ರಾ ಸ್ಥಳದಲ್ಲಿ ಕೌಂಟರ್ ತೆಗೆದು ನೋಂದಣಿ ಮಾಡಿಕೊಳ್ಳಬೇಕು. ವ್ಯವಸ್ಥಿತವಾಗಿ ಜಾನುವಾರು ಕಟ್ಟಲು ಹಾಗೂ ಹೊಸ ತಳಿಯ ಜಾನುವಾರು ಪ್ರದರ್ಶನ ಹಾಗೂ ಜಾತ್ರೆಯಲ್ಲಿ ವಿವಿಧ ವಸ್ತು ಪ್ರದರ್ಶನ ಮಳಿಗೆಗಳ ಆಯೋಜನೆಗೆ ಹಾಗೂ ಜಾತ್ರೆಗೆ ಆಗಮಿಸುವ ರೈತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಒಂದು ವಾರಕ್ಕೂ ಹೆಚ್ಚಿನ ಕಾಲ ಜಾತ್ರೆ ನಡೆಯುವುದರಿಂದ ಚಳಿಗಾಲದಲ್ಲಿ ಜಾನುವಾರುವಿಗೆ ರೋಗ ಬರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಲಸಿಕೆ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಸೂಕ್ತ ವೈದ್ಯೋಪಚಾರಕ್ಕೆ ಪಶು ವೈದ್ಯಾಽಕಾರಿಗಳನ್ನು ನೇಮಿಸಿ, 3 ತಂಡಗಳನ್ನು ರಚಿಸಿ ವೈದ್ಯಕೀಯ ಸೇವೆ ಒದಗಿಸಬೇಕು. ಅತಿ ಹೆಚ್ಚು ಜನರು ಭಾಗವಹಿಸುವುದರಿಂದ ಸಾರ್ವಜನಿಕರು, ರೈತರ ಅನುಕೂಲಕ್ಕಾಗಿ ಆರೋಗ್ಯ ತಪಾಸಣಾ ಕೇಂದ್ರ ತೆರೆಯಬೇಕು. ದಿನನಿತ್ಯ ಶೇಖರಣೆಯಾಗುವ ಕಸವನ್ನು ತೆರವುಗೊಳಿಸಿ, ಸ್ವಚ್ಛತೆ ಕಾಪಾಡುವುದು ಸೇರಿ ಮಹಾನಗರ ಪಾಲಿಕೆಯಿಂದ ಶೌಚಗೃಹ ವ್ಯವಸ್ಥೆ, ಹೆಸ್ಕಾಂದಿAದ ವಿದ್ಯುತ್ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ ಸೇರಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು.
ಸೂಕ್ತ ಸಾರಿಗೆ ವ್ಯವಸ್ಥೆ, ಅಗ್ನಿಶಾಮಕ ವಾಹನ ನಿಲುಗಡೆ, ಪೊಲೀಸ್ ಬಂದೋಬಸ್ತ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಸೇರಿ ಸಕಲ ಸೌಕರ್ಯ ಕಲ್ಪಿಸಲು ಜಿಲ್ಲಾಽಕಾರಿ ಸೂಚನೆ ನೀಡಿದರು.
ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಡಾ. ಬಸವರಾಜ ಯಲಿಗಾರ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಅಶೋಕ ಗೋಣಸಗಿ, ಜಿಲ್ಲಾ ಅಗ್ನಿ ಶಾಮಕ ಅಽಕಾರಿ ಶಶಿಧರ ನೀಲಗರ, ತಾಲೂಕು ಆರೋಗ್ಯಾಽಕಾರಿ ಕೇಸರ್ ಸಿಂಗ್, ಬಿಎಲ್‌ಡಿಇ ಸಂಸ್ಥೆ ಅಽÃಕ್ಷಕ ಡಾ. ಎಸ್.ಎಂ. ಬಿರಾದಾರ, ಎಪಿಎಂಸಿ ಎಇಇ ಎಲ್.ಬಿ. ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net