ವಿಜಯಪುರ ನಗರದ ಆರ್‌ಕೆಎಂ ಶಿಕ್ಷಣ ಸಂಸ್ಥೆಯಲ್ಲಿ `ಏಕದಿನ ಅಗ್ನಿ ಸುರಕ್ಷತಾ ಜಾಗೃತಿ ಹಾಗೂ ತರಬೇತಿ ಕಾರ್ಯಾಗಾರ' ನಡೆಯಿತು. ಅಗ್ನಿಶಾಮಕ ಇಲಾಖೆ ಜಿಲ್ಲಾಽಕಾರಿ ಶಶಿಧರ್ ನಿಲಗಾರ, ಠಾಣಾಽಕಾರಿ ಉಮೇಶ್ ತಳಕೇರಿ ಇದ್ದಾರೆ.
ವಿಜಯಪುರ: ನಗರದ ಆರ್‌ಕೆಎಂ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ `ಏಕದಿನ ಅಗ್ನಿ ಸುರಕ್ಷತಾ ಜಾಗೃತಿ ಹಾಗೂ ತರಬೇತಿ ಕಾರ್ಯಾಗಾರ' ನಡೆಯಿತು.
ಅಗ್ನಿಶಾಮಕ ಇಲಾಖೆ ಜಿಲ್ಲಾಽಕಾರಿ ಶಶಿಧರ್ ನಿಲಗಾರ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಅಗ್ನಿ ಸುರಕ್ಷತೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದಿಸುವ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಠಾಣಾಧಿಕಾರಿ ಉಮೇಶ್ ತಳಕೇರಿ ಮಾತನಾಡಿ, ಅಗ್ನಿ ಎಂದರೇನು, ಅಗ್ನಿಯ ವಿಧಗಳು, ಅಗ್ನಿಯನ್ನು ನಿಯಂತ್ರಿಸುವ ವಿಧಾನಗಳು, ಯಾವುದೇ ರೀತಿಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕೈಗೊಳ್ಳಬೇಕಾದ ಸಾಮಾನ್ಯ ಕ್ರಮಗಳು ಕುರಿತು ವಿವರವಾಗಿ ಮಾಹಿತಿ ನೀಡಿದರು.
ಆರ್‌ಕೆಎಂ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಕರ್ಪೂರಮಠ ಉದ್ಘಾಟನೆ ನೆರವೇರಿಸಿದರು.
ಪ್ರಾಂಶುಪಾಲ ಡಾ. ಎನ್.ಎಂ. ರುದ್ರಗೌಡರ್, ಉಪ ಪ್ರಾಂಶುಪಾಲ ಡಾ. ಎಸ್.ಬಿ. ಹಿರೇಮಠ, ಡಾ. ಎಂ.ಎನ್. ರುದ್ರಗೌಡರ, ಡಾ. ಎಸ್.ಆರ್. ಸರಶೆಟ್ಟಿ ಮತ್ತಿತರರಿದ್ದರು.