ಗೊಳಸಂಗಿ ಸಮೀಪದ ತೆಲಗಿ ಗ್ರಾಮದ ಶ್ರೀನಿವಾಸ ಬೆಟಗೇರಿ ಅವರ ಮನೆಗೆ ಗಂಗಾವತಿ ಶಾಸಕ ಜನಾರ್ದನ ರಡ್ಡಿ ಭೇಟಿ ನೀಡಿದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪ್ರಕಾಶ ರಡ್ಡಿ, ಸಂಜೀವ ಬೆಟಗೇರಿ ಮತ್ತಿತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತೆಲಗಿ ಗ್ರಾಮಕ್ಕೆ ಶಾಸಕ ಜನಾರ್ಧನ ರಡ್ಡಿ ಭೇಟಿ
ಬೆಳ್ಳುಬ್ಬಿ ಒಡೆತನದ ಸಕ್ಕರೆ ಕಾರ್ಖಾನೆ ಪೂರ್ವ ಸಿದ್ಧತೆ ಪರಿಶೀಲನೆ
ಗೊಳಸಂಗಿ:ನಿರಂತರ ಬರಗಾಲ, ನಿರುದ್ಯೋಗದ ಬವಣೆಯಲ್ಲಿ ಬಸವಳಿದಿದ್ದ ಉತ್ತರ ಕರ್ನಾಟಕ ಭವಿಷ್ಯದಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ಔದ್ಯೋಗಿಕ ತಾಣವಾಗಲಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರಡ್ಡಿ ಭರವಸೆ ನೀಡಿದರು.
ಬಾಗಲಕೋಟೆ ಉಪಚುನಾವಣೆ ಪ್ರಚಾರಾರ್ಥವಾಗಿ ಈ ಭಾಗಕ್ಕೆ ಬಂದಿದ್ದ ಅವರು ತೆಲಗಿ ಗ್ರಾಮದ ಶ್ರೀನಿವಾಸ ಬೆಟಗೇರಿ ಅವರ ಮನೆಗೆ ಸೋಮವಾರ ಖಾಸಗಿಯಾಗಿ ಭೇಟಿ ನೀಡಿ ನಂತರ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ಒಡೆತನದ ನಿಯೋಜಿತ ಸಕ್ಕರೆ ಕಾರ್ಖಾನೆ ಪೂರ್ವ ಸಿದ್ಧತೆ ಪರಿಶೀಲಿಸಿ ಅವರು ಮಾತನಾಡಿದರು.
ಈ ಭಾಗದ ಯುವಕರು ಇದುವರೆಗೆ ಪದವಿ ಶಿಕ್ಷಣ ಮುಗಿಸಿ ಉದ್ಯೋಗ ಅರಸಿ ದೂರದ ಬೆಂಗಳೂರಿಗೆ ಹೆತ್ತವರನ್ನು ಬಿಟ್ಟು ಹೋಗುತ್ತಿದ್ದರು. ಇನ್ನು ಮುಂದೆ ಇದೇ ಭಾಗದಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ಕೈಗಾರಿಕೆ ಉದ್ಯಮಗಳು ತಲೆ ಎತ್ತಲಿವೆ. ಹೀಗಾಗಿ ಈ ಭಾಗದ ಯುವಕರು ಇನ್ನು ಮುಂದೆ ನಿರುದ್ಯೋಗದ ಸಮಸ್ಯೆ ಎದುರಿಸಬೇಕಿಲ್ಲ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪ್ರಕಾಶ ರಡ್ಡಿ, ಸಂಜೀವ ಬೆಟಗೇರಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ ಮತ್ತಿತರರಿದ್ದರು.