ನೆಕ್ಸ್ಟ್ ಜನರೇಷನ್ ಟಿಯಾಗೋ ಕಾರು ಬಿಡುಗಡೆ

ವಿಜಯಪುರದ ಬಿಜ್ಜರಗಿ ಮೋಟಾರ್ಸ್ ಆವರಣದಲ್ಲಿ ಆಕರ್ಷಕ ವಿನ್ಯಾಸ ನೆಕ್ಸ್ ್ಟಜನರೇಷನ್ ಟಿಯಾಗೋ ಕಾರನ್ನು ಡಾ. ರವೀಂದ್ರ ಮದ್ರಕಿ ಬಿಡುಗಡೆಗೊಳಿಸಿದರು. ವ್ಯವಸ್ಥಾಪಕ ನಿರ್ದೇಶಕ ರಾಜು ಬಿಜ್ಜರಗಿ, ಉದಯ ಕುಮಾರ ಯಲವಾರ, ಮಲ್ಲಿಕಾರ್ಜುನ  ಹಟ್ಟಿಖಾಲ ಇತರರಿದ್ದರು.
ವಿಜಯಪುರದ ಬಿಜ್ಜರಗಿ ಮೋಟಾರ್ಸ್ ಆವರಣದಲ್ಲಿ ಆಕರ್ಷಕ ವಿನ್ಯಾಸ ನೆಕ್ಸ್ ್ಟಜನರೇಷನ್ ಟಿಯಾಗೋ ಕಾರನ್ನು ಡಾ. ರವೀಂದ್ರ ಮದ್ರಕಿ ಬಿಡುಗಡೆಗೊಳಿಸಿದರು. ವ್ಯವಸ್ಥಾಪಕ ನಿರ್ದೇಶಕ ರಾಜು ಬಿಜ್ಜರಗಿ, ಉದಯ ಕುಮಾರ ಯಲವಾರ, ಮಲ್ಲಿಕಾರ್ಜುನ ಹಟ್ಟಿಖಾಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೆಕ್ಸ್ಟ್ ಜನರೇಷನ್ ಟಿಯಾಗೋ ಕಾರನ್ನು ಮಾರುಕಟ್ಟೆಗೆ ಅದ್ದೂರಿಯಾಗಿ ಬಿಡುಗಡೆ
  • ಅತ್ಯುತ್ತಮ ಕಾರ್ಯಕ್ಷಮತೆ
ವಿಜಯಪುರ : ಸ್ಥಳೀಯ ಆಟೋಮೊಬೈಲ್ ಸಂಸ್ಥೆ ಬಿಜ್ಜರಗಿ ಮೋಟಾರ್ಸ್‌ನ ಆವರಣದಲ್ಲಿ ಬುಧವಾರ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ವಿನ್ಯಾಸದ ನೆಕ್ಸ್ಟ್ ಜನರೇಷನ್ ಟಿಯಾಗೋ ಕಾರನ್ನು ಮಾರುಕಟ್ಟೆಗೆ ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು.
ನಗರದ ಖ್ಯಾತ ಮೂತ್ರಪಿಂಡ ತಜ್ಞ ಡಾ. ರವೀಂದ್ರ ಮದ್ರಕಿ ಹೊಸ ವಾಹನವನ್ನು ಅಧಿಕೃತವಾಗಿ ಅನಾವರಣಗೊಳಿಸಿದರು.
ಹೊಸ ತಲೆಮಾರಿನ ಈ ಟಿಯಾಗೋ ಕಾರು ಗ್ರಾಹಕರನ್ನು ಸೆಳೆಯುವಂತಹ ಆಧುನಿಕ ವಿನ್ಯಾಸ, ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ.
ಈ ಆಕರ್ಷಕ ಕಾರಿನ ಆರಂಭಿಕ ಬೆಲೆ 4.69 ಲಕ್ಷ ರೂ. ಗಳಾಗಿದೆ (ಎಕ್ಸ್-ಶೋ ರೂಮ್) ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
ಆಟೋಮೊಬೈಲ್ ಸರ್ವೇಯರ್ ಎನ್.ಎಸ್. ಪಾಟೀಲ್, ಜಿಲ್ಲಾ ಕಾರ್ಯಪಾಲಕ ಅಭಿಯಂತರರಾದ ವಿದ್ಯಾಧರ ನ್ಯಾಮಗೌಡ, ಬಿಜ್ಜರಗಿ ಗ್ರೂಫ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜು ಬಿಜ್ಜರಗಿ, ಉದಯ ಕುಮಾರ ಯಲವಾರ, ಮಲ್ಲಿಕಾರ್ಜುನ ಹಟ್ಟಿಖಾಲ ಸೇರಿ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net