ಕಿತ್ತೂರ ರಾಣಿ ಚನ್ನಮ್ಮ ಕೇಂದ್ರ ಬಸ್ ನಿಲ್ದಾಣದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೊಸದಾಗಿ ಆರಂಭಗೊAಡ ನೂತನ ಸಾರಿಗೆ ಬಸ್‌ಗೆ ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿದರು. ಡಾ. ಆನಂದ ಕೆ., ರಿಷಿ ಆನಂದ, ನಾರಾಯಣಪ್ಪ ಕುರುಬರ ಮತ್ತಿತರರಿದ್ದಾರೆ.
ವಿಜಯಪುರ; ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೊಸದಾಗಿ ಆರಂಭಗೊAಡ ನೂತನ ಸಾರಿಗೆ ಬಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲರ ಸೂಚನೆಯಂತೆ ವಿಜಯಪುರದಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳ ಆಲಮಟ್ಟಿ ಉದ್ಯಾನವನಕ್ಕೆ ನೂತನ ಸಾರಿಗೆಯನ್ನು ಆರಂಭಗೊಳಿಸಲಾಗಿದೆ. ಈ ಸಾರಿಗೆಯು ಪ್ರತಿದಿನ ಆರು ಸರತಿಯಲ್ಲಿ ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೋಗಿ ಬರಲಿದೆ.
ಇಲ್ಲಿನ ಕಿತ್ತೂರ ರಾಣಿ ಚನ್ನಮ್ಮ ಕೇಂದ್ರ ಬಸ್ ನಿಲ್ದಾಣದಿಂದ ನಿತ್ಯ ಬೆಳಗ್ಗೆ 10 ಗಂಟೆಯಿAದ ಮೊದಲ ಬಸ್ ಸಂಚಾರ ಆರಂಭಗೊಳ್ಳಲಿದೆ.
ಆಲಮಟ್ಟಿಯ ಉದ್ಯಾನವನದಿಂದ ಕೊನೆಯ ಬಸ್ ರಾತ್ರಿ 8.20ಕ್ಕೆ ಮರಳಿ ವಿಜಯಪುರಕ್ಕೆ ಬಸ್ ಆಗಮಿಸಲಿದೆ. ಸಚಿವರು ಮಾತನಾಡಿ, ಪ್ರೇಕ್ಷಣೀಯ ಸ್ಥಳಗಳಿಗೆ ಹೊಸದಾಗಿ ತನ್ನ ಸಂಚಾರ ಆರಂಭಿಸಲಿರುವ ಈ ಬಸ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಽಕಾರಿ ಡಾ. ಆನಂದ ಕೆ., ಜಿ.ಪಂ. ಸಿಇಒ ರಿಷಿ ಆನಂದ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಽಕಾರಿ ನಾರಾಯಣಪ್ಪ ಕುರುಬರ, ವಿಜಯಪುರ ಮೂರನೇ ಘಟಕದ ವ್ಯವಸ್ಥಾಪಕ ಎಸ್.ಎಂ. ವಾಲೀಕಾರ, ಸಹಾಯಕ ಸಂಚಾರ ವ್ಯವಸ್ಥಾಪಕ ಜಾನಪ್ಪ ಹುಗ್ಗೆಣ್ಣನವರ, ಪ್ರವಾಸೋದ್ಯಮ ಇಲಾಖೆ ಅನೀಲಕುಮಾರ ಬಣಜಿಗೇರ ಮತ್ತಿತರರಿದ್ದರು.