ಲಚ್ಯಾಣ ಗ್ರಾಮಕ್ಕೆ ನೂತನ ಬಸ್ ಸಂಪರ್ಕ

೨೨-ಇಂಡಿ-೧ಎ ಇಂಡಿ ನಗರದಲ್ಲಿ ನೂತನ ಬಸ್ ಸಂಚಾರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಶುಕ್ರವಾರದಂದು  ಚಾಲನೆ ನೀಡಿದರು. ತಹಶೀಲ್ದಾರ ಕಡಕಭಾವಿ, ಎಸಿ ಚಿದಾನಂದ ಗುರುಸ್ವಾಮಿ, ಕೃಷಿ ಇಲಾಖೆಯ ಇಒ ಮಹಾದೇವಪ್ಪ ಏವೂರ ಮತ್ತಿತರರಿದ್ದರು.
೨೨-ಇಂಡಿ-೧ಎ ಇಂಡಿ ನಗರದಲ್ಲಿ ನೂತನ ಬಸ್ ಸಂಚಾರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಶುಕ್ರವಾರದಂದು ಚಾಲನೆ ನೀಡಿದರು. ತಹಶೀಲ್ದಾರ ಕಡಕಭಾವಿ, ಎಸಿ ಚಿದಾನಂದ ಗುರುಸ್ವಾಮಿ, ಕೃಷಿ ಇಲಾಖೆಯ ಇಒ ಮಹಾದೇವಪ್ಪ ಏವೂರ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ, ಇಂಡಿ
ತಾಲೂಕಿನ ಲಚ್ಯಾಣ ಗ್ರಾಮದ ಜನರ ಬಹುದಿನಗಳ ಬೇಡಿಕೆಯಾದ ಕ್ಷೇತ್ರದ ಮೂಲಕ ನಿತ್ಯ ಸೊಲ್ಲಾಪುರ ಸಂಪರ್ಕಿಸುವ ನೂತನ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವ ಒತ್ತಾಯಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಕೂಡಲೇ ಸ್ಪಂದಿಸಿ ಶುಕ್ರವಾರದಂದು ನೂತನ ಬಸ್ ಸಂಚಾರಕ್ಕೆ ನಗರದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತಾಲೂಕಿನ ಸುಕ್ಷೇತ್ರ ಲಚ್ಯಾಣದ ಆರಾದ್ಯ ದೇವ ಸಿದ್ಧಲಿಂಗ ಮಹಾರಾಜರ ದರ್ಶನಕ್ಕೆ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ನಗರದಿಂದ ಬರುವ ಅಪಾರ ಸಂಖ್ಯೆಯ ಭಕ್ತರಿಗೆ, ಲಚ್ಯಾಣ ಹಾಗೂ ಸುತ್ತ ಗ್ರಾಮದ ವ್ಯಾಪಾಸ್ಥರಿಗೆ ಸೊಲ್ಲಾಪುರದಿಂದ ತಮ್ಮೂರಿಗೆ ನೇರವಾಗಿ ಬರಲು ಸಂಜೆ ವೇಳೆ ರೈಲು ಸೌಲಭ್ಯ ಇಲ್ಲದ ಕಾರಣ ತೀವ್ರ ತೊಂದರೆ ಆಗುತ್ತಿತ್ತು. ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಯಾತ್ರಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಲಚ್ಯಾಣ ಗ್ರಾಮಸ್ಥರು ನೂತನ ಬಸ್‌ಗೆ ಶುಕ್ರವಾರದಂದು ಸಿದ್ಧಲಿಂಗ ಮಹಾರಾಜರ ಮಠದ ಆವರಣದಲ್ಲಿ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಸ್ ಚಾಲಕ ನಿರ್ವಾಹಕರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಇಂಡಿ ತಹಶೀಲ್ದಾರ ಕಡಕಭಾವಿ, ಎಸಿ ಚಿದಾನಂದ ಗುರುಸ್ವಾಮಿ, ಕೃಷಿ ಇಲಾಖೆಯ ಇಒ ಮಹಾದೇವಪ್ಪ ಏವೂರ, ಧನರಾಜ ಮುಜಗೊಂಡ ಇಂಡಿ ಸಾರಿಗೆ ಘಟಕದ ವ್ಯವಸ್ಥಾಪಕ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net