ಸಿಂದಗಿ ನಗರದಲ್ಲಿ ಕಂದಾಯ ಅಧಿಕಾರಿಗೆ ವಿಜಯಪುರ ಜಿಲ್ಲೆಯ ಹೋರಾಟ ಸಮಿತಿಯ ಹೋರಾಟಗಾರರು 371(ಜೆ) ಮೀಸಲಾತಿಗೆ ವಿಜಯಪುರ ಜಿಲ್ಲೆಯನ್ನು ಸೇರಿಸಲು ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಲಾಯಪ್ಪ ಇಂಗಳೆ, ಎನ್. ಸುರೇಶ ಕುಮಾರ, ರಾಮಚಂದ್ರ ಮೂಡಗಿ, ವಿನೋದ ಖೇಡ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೋರಾಟಗಾರ ಲಾಯಪ್ಪ ಇಂಗಳೆ ಆಕ್ರೋಶ
ಕಂದಾಯ ಅಧಿಕಾರಿಗೆ ಮನವಿ
ಸಿಂದಗಿ:
ಹೈದರಾಬಾದ್ ವಿಮೋಚನಾ ಚಳವಳಿ ರೂವಾರಿ ಸ್ವಾಮಿ ರಮಾನಂದ ತೀರ್ಥರ ತವರು ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಯನ್ನು ಕಡೆಗಣಿಸಿದ್ದು ಬಹು ದೊಡ್ಡ ಅನ್ಯಾಯ ಎಂದು ಹೋರಾಟಗಾರ ಲಾಯಪ್ಪ ಇಂಗಳೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಹಸೀಲ್ದಾರ್ ಕಾರ್ಯಾಲ ಯದಲ್ಲಿ ಬುಧವಾರ ವಿಜಯಪುರ ಜಿಲ್ಲಾ 371ಜೆ ಹೋರಾಟ ಸಮಿತಿ ಹಾಗೂ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಮುಖಂಡರು ಜಿಲ್ಲೆಯನ್ನು 371(ಜೆ)ಮೀಸಲಾತಿಗೆ ಸೇರಿಸಲು ಒತ್ತಾಯಿಸಿ, ಕಂದಾಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
371(ಜೆ) ಮೀಸಲಾತಿ ಪ್ರದೇಶದ ಹೈಕೋರ್ಟ್, ಸಾರಿಗೆ, ಪುರಾತತ್ವ ಇಲಾಖೆ, ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಕೃಷ್ಣಾಕಾಡಾ ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರದೊಂದಿಗೆ ಬೆಸೆದುಕೊಂಡಿರುವ ಹೈದರಾಬಾದ್ ನಿಜಾಮನ ಆಡಳಿತಕ್ಕೊಳಪಟ್ಟಿದ್ದ ಜಿಲ್ಲೆಯನ್ನು 371(ಜೆ) ಮೀಸಲಾತಿಯಿಂದ ಕೈಬಿಟ್ಟ ಪರಿಣಾಮ ಮಕ್ಕಳಿಗೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಸರ್ಕಾರಿ ಸೌಲಭ್ಯಗಳಿಂದ ಅನ್ಯಾಯವಾಗುತ್ತಿದೆ. ಈ ಮೀಸಲಾತಿ ಸೌಲಭ್ಯ ಒದಗಿಸಲು ಜಿಲ್ಲೆಯ ಸಚಿವರು, ಶಾಸಕರು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಅಧ್ಯಕ್ಷ ರಾಮಚಂದ್ರ ಮೂಡಗಿ ಹಾಗೂ ಸಮಿತಿ ಹೋರಾಟಗಾರ ವಿನೋದ ಖೇಡ ಅವರು, ಕೂಡಲೇ ರಾಜ್ಯ ಸರ್ಕಾರ ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಯಡಿ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಜಿಲ್ಲೆ ಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರಾದ ಎನ್. ಸುರೇಶ ಕುಮಾರ, ಮಲ್ಲನಗೌಡ ಪಾಟೀಲ(ಬರಟಗಿ), ಅನೀಲ ಇಕ್ಕಡೆ, ಅಶೋಕ ವಾಲಿಕಾರ, ಮುತ್ತುರಾಜ ಸಾತಿಹಾಳ, ಉಮೇಶ ಕಲಹಳ್ಳಿ, ಬಾಗಪ್ಪ ಕೆ. ಹರಿಜನ, ಮಲ್ಲಪ್ಪ ದೊಡಮನಿ, ಬಸಪ್ಪ ಕೋರಳ್ಳಿ, ಮಹಾಂತಗೌಡ ಹುಗ್ಗಿ ಮತ್ತಿತರರಿದ್ದರು.