ವಿಜಯಪುರದ ಸೇಂಟ್ ಜೋಸೆ-ï ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಸಸಿಗಳನ್ನು ನೀಡಲಾಯಿತು. ಗಿರೀಶ ಪಾಟೀಲ, ಪ್ರಕಾಶ ನಾಲತವಾಡ, ಶಾಜು ಜೋಸೆ-ï ಮತ್ತಿತರರಿದ್ದಾರೆ.
ವಿಜಯಪುರ : ಪರಿಸರ ಸಂರಕ್ಷಣೆ ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯ ಎಂದು ಪಾಲಿಕೆ ಸದಸ್ಯ ಗಿರೀಶ ಪಾಟೀಲ ಹೇಳಿದರು.
ಇಲ್ಲಿನ ವಜ್ರಹನುಮಾನ ನಗರದ ಸೇಂಟ್ ಜೋಸೆ-ï ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ವಾಹನ ಸಂಚಾರದಿAದಾಗಿ ಭಾರತ ವಾಯುಮಾಲಿನ್ಯದಲ್ಲಿ ಜಗತ್ತಿನಲ್ಲಿಯೇ 2ನೇ ಸ್ಥಾನದಲ್ಲಿದೆ. ವಿದ್ಯಾರ್ಥಿಗಳು ಪರಿಸರ ಮಾಲಿನ್ಯದ ಕುರಿತು ಜಾಗೃತರಾಗಬೇಕು. ಬದುಕು, ಬದುಕಲು ಬಿಡು. ಪ್ರಕೃತಿಯಲ್ಲಿನ ಸಕಲ ಚರಾಚರ ಅಂಶಗಳನ್ನು ಪ್ರೀತಿಸಬೇಕು. ಆದರೆ ಇಂದು ಮಾನವ ತನ್ನ ಸ್ವಾರ್ಥ, ದುರಾಸೆ, ಹಣದಾಸೆಗಾಗಿ ಪರಿಸರ ಹಾಗೂ ಪ್ರಕೃತಿಯ ಮೇಲೆ ನಿರಂತರವಾಗಿ ಎಗ್ಗಿಲ್ಲದೆ ಆಕ್ರಮಣವನ್ನು ನಡೆಸಿಕೊಂಡು ಬರುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಶಿಕ್ಷಣ ಇಲಾಖಾ ಅಽಕಾರಿ ಪ್ರಕಾಶ ನಾಲತವಾಡ ಮಾತನಾಡಿ, ಪ್ಲಾಸ್ಟಿಕ್ ಇಲ್ಲದೆ ನಮ್ಮ ನಿತ್ಯದ ವ್ಯವಹಾರಗಳು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಇಂದು ನಾವು ಪೂರ್ವಗ್ರಹ ಪೀಡಿತರಾಗಿದ್ದೇವೆ. ಆದರೆ, ನಮ್ಮ ಹಿರಿಯರು ಪ್ಲಾಸ್ಟಿಕ್ ಇಲ್ಲದೆ ಲೋಹ ಹಾಗೂ ಮಣ್ಣಿನ ಪಾತ್ರೆಗಳಲ್ಲಿ ನೂರಾರು ವರ್ಷಗಳ ಕಾಲ ಆರೋಗ್ಯಕರವಾದ ತುಂಬು ಜೀವನವನ್ನು ನಡೆಸಿರುವುದನ್ನು ನಾವು ಯಾರು ಮರೆಯಬಾರದು. ಹೀಗಾಗಿ, ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಅತಿಥಿ ಮಹೋದಯರು 2,600 ವಿದ್ಯಾರ್ಥಿಗಳಿಗೆ 2,600 ವಿವಿಧ ರೀತಿಯ ಸಸಿಗಳನ್ನು ವಿತರಿಸಿ ಆ ಸಸಿಯನ್ನು ಬೆಳೆಸಿ ಪೋಷಿಸುವ ಮಾರ್ಗದರ್ಶನವನ್ನು ನೀಡಿದರು.
ಸೇಂಟ್ ಜೋಸೆ-ï ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಾಜು ಜೋಸೆ-ï, ಭಾರತಿ ಕರಡಿ, ವಿಜಯಕುಮಾರ ಹಳ್ಳದಮನಿ, ಲೋಕೇಶ ಕಾಂಬಳೆ, ರಾಜೇಶ ನುಚ್ಚಿ, ಸಚೀನ ಡೋಣೂರ ಮತ್ತಿತರರಿದ್ದರು.