ನವದೆಹಲಿಯ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ. ಟಿ. ದಿಲೀಪಕುಮಾರ ಅವರು ರಾಷ್ಟ್ರೀಯ ಸಿಮ್ಯುಲೇಶನ್ ಸೆಂಟರ್ ಹಾಗೂ ಸಮ್ಮೇಳನ ಉದ್ಘಾಟಿಸಲಿರುವರು. ರಾಜೀವ್‌ಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಭಗವಾನ ಬಿ.ಸಿ., ನವ ದೆಹಲಿಯ ಜೆಪ್ಯಾಗೊ ಡೆಪ್ಯೂಟಿಕಂಟ್ರಿ ಡೈರೆಕ್ಟರ್ ಡಾ. ಕಮಲೇಶ ಲಾಲಚಂದಾನಿ, ಲ್ಯಾರ್ಡಲ್ ಮೆಡಿಕಲ್ ಲಿ. ಮ್ಯಾನೇಜಿಂಗ್ ಡೈರಕ್ಟರ್ ಸಂಜಯ ಸಿಂಗ್ ಪಾಲ್ಗೊಳ್ಳಲಿದ್ದಾರೆ. ಡಿ. ೫ ರಿಂದ ೭ ರವರೆಗೆ ಮೂರು ದಿನಗಳ ಕಾಲ ಈ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.