ಉಪನ್ಯಾಸ ಮಂಡಿಸಿದ ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಡಾ.ರಾಜಕುಮಾರ ಅವರದ್ದು ಹೋಲಿಕೆಗೆ ನಿಲುಕದ ವ್ಯಕ್ತಿತ್ವ. ಅವರಿಗೆ ಅವರೇ ಸಾಟಿ, ನಾವು ಒಳ್ಳೆಯವರನ್ನು ರಾಜಕುಮಾರ ಅವರಿಗೆ ಹೋಲಿಸುತ್ತೇವೆ, ಓರ್ವ ತಾಯಿ ತನ್ನ ಮಗನನ್ನು ನನ್ನ ಮಗ ರಾಜಕುಮಾರ ಇದ್ದಂತೆ ಇದ್ದಾನೆ ಎಂದು ಅಭಿಮಾನದಿಂದ ಹೇಳುವುದುಂಟು. ಅಭಿಮಾನಕ್ಕೆ ಹೋಲಿಕೆ ಡಾ.ರಾಜ್ ಆಗಿದ್ದಾರೆ ಹೊರತು ರಾಜ್‌ಗೆ ಬೇರೆ ಹೋಲಿಕೆ ಪದಗಳಿಲ್ಲ, ಅವರದ್ದು ವರ್ಣನಾತೀತ ವ್ಯಕ್ತಿತ್ವ, ಅವರ ಬಣ್ಣಿಸಲು ಉಪಮೇಯಗಳೇ ಇಲ್ಲ ಎಂದರು.