ವಿಜಯಪುರದ ಬಿಡಿಈ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶಿವನ್ಯಾ ವಿಜಾಪೂರ, ಎ.ಡಿ. ದೇಶಪಾಂಡೆ ಮತ್ತಿತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಮಾಣ ವಚನ
ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ
ವಿಜಯಪುರ:
ಭಾರತೀಯ ವಿಚಾರಗಳು ಜಗತ್ತಿನ ಮೂಲೆ ಮೂಲೆಗಳಲ್ಲೂ ಪ್ರಸಿದ್ಧ. ಸಂಗೀತ ಭಾರತದ ಅದ್ಭುತ ಕೊಡುಗೆ. ಮನಸ್ಸಿನ ಮೂಲೆಯಲ್ಲಿ ಮತ್ತು ನರನಾಡಿಗಳಲ್ಲಿ ಚೈತನ್ಯವನ್ನು ತುಂಬುವುದೇ ಸಪ್ತಸ್ವರಗಳ ಸಂಗಮವಾದ ಸಂಗೀತ ಎಂದು ಗಾಯಕಿ ಶಿವನ್ಯಾ ವಿಜಾಪೂರ ಹೇಳಿದರು.
ನಗರದ ಬಿಡಿಈ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ, ಕಾಲೇಜು ಸಂಸತ್‌ನ ಪ್ರಮಾಣ ವಚನ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗೀತಕ್ಕೆ ಮಾರುಹೋಗದ ಮನುಷ್ಯನೇ ಇಲ್ಲ. ಕೃಷ್ಣನ ವೇಣು ನಾದವನ್ನು ಕೇಳಿದರೆ ಎಲ್ಲ ಕಡೆ ಚದುರಿದ್ದ ಗೋವುಗಳು ಮತ್ತು ಕೆಲಸದಲ್ಲಿ ಮಗ್ನರಾದ ಗೋಪಿಕೆಯರು ದೈವಿ ಭಕ್ತಿಯಲ್ಲಿ ಮುಳುಗಿ ಅವನ ಹತ್ತಿರ ಓಡೋಡಿ ಬರುತ್ತಿದ್ದರು. ಹೀಗಾಗಿ, ವಿದ್ಯಾರ್ಥಿನಿಯರಾದ ನೀವುಗಳು ಒಂದಿಷ್ಟು ಸಂಗೀತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಉಪಾಧ್ಯಕ್ಷ ಎ.ಡಿ. ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರ ಅಳವಡಿಸಿಕೊಂಡು ಮಹತ್ವಪೂರ್ಣ ಜೀವನ ನಡೆಸಬೇಕು. ಉಪನ್ಯಾಸಕರು ವೈದ್ಯರಿದ್ದಂತೆ ಮಕ್ಕಳಿಗೆ ಪಾಠ ಬೋಧನೆ ಮೂಲಕ ಮನಸ್ಸಿನ ಆರೋಗ್ಯ ಸುಧಾರಿಸುವರು ಎಂದರು.
ಶಾಲಾ ಸಂಸತ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಜಂಟಿ ಕಾರ್ಯದರ್ಶಿ ರಾಘವೇಂದ್ರ ಚಿಕ್ಕಲಕಿ, ಸಂಸ್ಥೆಯ ಸದಸ್ಯ ಎಚ್.ಬಿ. ಕುಲಕರ್ಣಿ (ಮಮದಾಪೂರ), ಪ್ರಾಚಾರ್ಯ ಪಿ.ಟಿ. ಕೋಟ್ನಿಸ್ ವೇದಿಕೆಯಲಿದ್ದರು.