ಕುಡಿದ ಎಳೆನೀರಿನ ಹಣ ಕೇಳಿದ್ದಕ್ಕೆ ಕೊಲೆ..!

ರಾಜಕುಮಾರ ನಾಗಪ್ಪ ವಾಗಶೆಟ್ಟಿ
ರಾಜಕುಮಾರ ನಾಗಪ್ಪ ವಾಗಶೆಟ್ಟಿ
Published on
ಇಂಡಿ : ತಾಲೂಕಿನ ತಡವಲಗಾ-ಬೋಳೆಗಾಂವ ಗ್ರಾಮದ ಜೋಡಗುಡಿಯ ಹತ್ತಿರ ಎಳೆನೀರು ಕುಡಿದ ಹಣ ಕೊಡಿ ಎಂದಿದ್ದಕ್ಕೆ ಕೋಪಗೊಂಡು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ರಾಜಕುಮಾರ ನಾಗಪ್ಪ ವಾಗಶೆಟ್ಟಿ (23) ಸಾ. ಬೋಳೆಗಾಂವ ಮೃತ ದುರ್ದೈವಿಯಾಗಿದ್ದು, ತಡವಲಗಾ ಗ್ರಾಮದ ಪ್ರವೀಣ ಹೊಸಮನಿ, ಪ್ರಶಾಂತ ಹೊಸಮನಿ ಎಂಬುವವರೇ ಕೊಲೆ ಮಾಡಿದ ದುಷ್ಕರ್ಮಿಗಳಾಗಿದ್ದಾರೆ.
ತಡವಲಗಾ-ಬೋಳೆಗಾಂವ ಜೋಡಗುಡಿಯ ಸಮೀಪವಿರುವ ರಾಜಕುಮಾರ ಅವರ ಕೋಲ್ಡ್ಡ್ರಿಂಕ್ಸ್ ಹಾಗೂ ಎಳೆನೀರು ಅಂಗಡಿಗೆ ಬಂದ ದುಷ್ಕರ್ಮಿಗಳು ಎಳೆನೀರು ಕುಡಿದಿದ್ದಾರೆ. ರಾಜಕುಮಾರ ಎಳೆನೀರಿನ ಹಣ ಕೇಳಿದ್ದಕ್ಕೆ ವಾದಕ್ಕಿಳಿದ ಆರೋಪಿಗಳು ಕಬ್ಬಿಣದ ಆಯುಧದಿಂದ ದಾಳಿ ಮಾಡಿದ್ದಾರೆ.
ಇದರಿಂದ ತೀವ್ರ ಅಸ್ವಸ್ಥನಾದ ಆತನನ್ನು ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಪೊಲೀಸರು ಬಂಽಸಿದ್ದು, ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net