ಸ್ಥಳೀಯ ಟಕ್ಕೆ ಬಳಿಯ ಶಾಸ್ತ್ರಿ ನಗರದ ನಿವಾಸಿ ಮರೆಪ್ಪ ಕರೆಪ್ಪ ಸಿಂಗಾಡಿ ಶಿಕ್ಷೆಗೆ ಗುರಿಯಾಗಿದ್ದಾನೆ. 2019 ಜು. 5 ರಂದು ಸೋಮಲಿಂಗ ಹೊನ್ನಪ್ಪ ಬಾಗೇವಾಡಿ ಎಂಬಾತನನ್ನು ಕೊಲೆ ಮಾಡಿದ್ದನು. ಮೃತ ಸೋಮಲಿಂಗ ಭಾಗ್ಯಶ್ರೀ ನೀಲಕಂಠ ದೊಡ್ಡಮನಿ ಎಂಬುವಳೊಂದಿಗೆ ಸಲುಗೆಯಿಂದ ಇದ್ದುದ್ದನ್ನು ಕಂಡ ಮರೆಪ್ಪ ಭಾಗ್ಯಶ್ರೀಯೊಂದಿಗೆ ಸಲುಗೆಯಿಂದ ಇರಬೇಡವೆಂಬುದಾಗಿಯೂ, ಹಾಗೆ ಮಾಡಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದನು. ಆದರೆ, ಭಾಗ್ಯಶ್ರೀ ಹಾಗೂ ಸೋಮನಿಂಗ ಪರಸ್ಪರ ಮಾತನಾಡುತ್ತಾ ನಿಂತಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದನು. ಗಾಯಗೊಂಡ ಸೋಮಲಿಂಗ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಅಸುನೀಗಿದ್ದನು.