ಸುಸ್ಥಿರ ಅಭಿವೃದ್ಧಿಗೆ ನಗರಸಭೆ ಸಹಕಾರಿ

 ಇಂಡಿ ನಗರದಲ್ಲಿ ನಗರಸಭೆ ಮತ್ತು ನಗರಸಭೆ ಯೋಜನಾ ಪ್ರಾಧಿಕಾರ ಕಚೇರಿಯನ್ನು ಹಜ್ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ ಉದ್ಘಾಟಿಸಿದರು. ಶಾಸಕ ವಿಠ್ಠಲ ಕಟಕದೊಂಡ, ನಗರಸಭೆ ಅಧಿಕಾರಿ ಶಿವಾನಂದ ಪೂಜಾರಿ, ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಬಸವರಾಜ ಗೊರನಾಳ ಮತ್ತಿತರರಿದ್ದರು.
ಇಂಡಿ ನಗರದಲ್ಲಿ ನಗರಸಭೆ ಮತ್ತು ನಗರಸಭೆ ಯೋಜನಾ ಪ್ರಾಧಿಕಾರ ಕಚೇರಿಯನ್ನು ಹಜ್ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ ಉದ್ಘಾಟಿಸಿದರು. ಶಾಸಕ ವಿಠ್ಠಲ ಕಟಕದೊಂಡ, ನಗರಸಭೆ ಅಧಿಕಾರಿ ಶಿವಾನಂದ ಪೂಜಾರಿ, ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಬಸವರಾಜ ಗೊರನಾಳ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ರಹೀಮ್ ಖಾನ್ ಹೇಳಿಕೆ
  • ನಗರಸಭೆ ಯೋಜನಾ ಪ್ರಾಧಿಕಾರ ಕಚೇರಿ ಉದ್ಘಾಟನೆ
ಇಂಡಿ: ಅನೇಕ ಪುರಸಭೆಗಳು ನಗರಸಭೆಯಾಗಲು ಹತ್ತಿಪ್ಪತ್ತು ವರ್ಷದಿಂದ ಪ್ರಯತ್ನಿಸುತ್ತಿವೆ. ಆದರೆ, ಇಂಡಿ ನಗರಸಭೆಯಾಗಿರುವುದು ಶಾಸಕ ಯಶವಂತರಾಯಗೌಡರ ಸತತ ಪ್ರಯತ್ನದಿಂದ ಎಂದು ಹಜ್ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಹೇಳಿದರು.
ತಾಲೂಕು ಆಡಳಿತ ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಗರಸಭೆ ಇಂಡಿ ಮತ್ತು ನಗರಸಭೆ ಯೋಜನಾ ಪ್ರಾಧಿಕಾರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಪುರಸಭೆಗೆ ೧೦ ಕೋಟಿ ರೂ. ಹಾಗೂ ನಗರಸಭೆಗೆ ೫೦ ಕೋಟಿ ರೂ. ಅನುದಾನ ಬರುತ್ತದೆ. ಆಸ್ತಿ ತೆರಿಗೆ ಸಂಗ್ರಹ, ನಗರದ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ನಗರಗಳ ಸುಸ್ಥಿರ ಅಭಿವೃದ್ಧಿಗೆ ನೇರವಾಗಿ ಕಾರ್ಯನಿರ್ವಹಿಸುತ್ತವೆ. ರಸ್ತೆ, ಸಾರ್ವಜನಿಕ ಉದ್ಯಾನಕ್ಕೆ ಪ್ರಯೋಜನವಾಗುತ್ತದೆ. ಇಂಡಿ ತಾಲೂಕು ಗಡಿ ಪ್ರದೇಶ ಕೊನೆಯ ತಾಲೂಕಾಗಿದ್ದರೂ ಅಭಿವೃದ್ಧಿಗಾಗಿ ಶಾಸಕರು ಇಷ್ಟೊಂದು ಅನುದಾನ ತಂದಿರುವ ಕಾರ್ಯ ಮೆಚ್ಚುವಂತದ್ದು ಎಂದರು.
ಸಾರ್ವಜನಿಕ ಆಸ್ತಿಗಳನ್ನು ಡಿಜಟಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇ-ಖಾತೆ ಅಭಿಯಾನ ಆರಂಭಿಸಿದೆ. ಆಸ್ತಿಗೆ ಸಂಬಂಧಿತ ಭೂ ಪರಿವರ್ತನೆ ಆದೇಶ, ಟೌನ್ ಪ್ಲಾನ್ ಕೆಜಿಪಿ ನಕ್ಷೆ ಮುಂತಾದ ಕಾಮಗಾರಿಗಳಿಗೆ ಅನುಕೂಲವಾಗಲಿದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಇಂದು ನಗರ ಸಭೆ ಉದ್ಘಾಟನೆ ಜತೆಗೆ ಕ್ರೀಡಾಂಗಣಕ್ಕೆ ಅಂಬೇಡ್ಕರ್ ಹೆಸರು ನಾಮಕರಣ ಮಾಡಲಾಗಿದೆ. ಇಂಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ ತಲಾ ೫೦ ಲಕ್ಷ ರೂ.ಗಳ ಕಾಮಗಾರಿಗಳಿಗೆ ಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ತಾಲೂಕಿನಲ್ಲಿ ಇಂದಿನಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ. 
ಪಟ್ಟಣದ ರಸ್ತೆಗಳಿಗೆ ೧೦ ಕೋಟಿ ರೂ. ಮಂಜೂರಾಗಿದೆ. ನಬಾರ್ಡ್ ಅಡಿಯಲ್ಲಿ ಜಿಟಿಟಿಸಿ ಕಾಲೇಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ವಿಠ್ಠಲ ಕಟಕದೊಂಡ, ನಗರ ಸಭೆ ಅಧಿಕಾರಿ ಶಿವಾನಂದ ಪೂಜಾರಿ, ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಬಸವರಾಜ ಗೊರನಾಳ ಮಾತನಾಡಿದರು.
ಜಿಲ್ಲಾಧಿಕಾರಿ ಕೆ. ಆನಂದ, ಎಸಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ, ಭೀಮಣ್ಣ ಕವಲಗಿ, ಬಿ.ಎಚ್. ಕನ್ನೂರ, ಹಾಸಿಂಪೀರ್ ವಾಲಿಕಾರ, ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ, ಶಿವಯೋಗಪ್ಪ ಚನಗೊಂಡ, ಬಿ.ಸಿ. ಸಾವಕಾರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net