ಅಂದಾಜು 14 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಯೋಜನೆ ಅನುಷ್ಠಾನಗೊಂಡರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಜನರ ಒತ್ತಾಯ ಮತ್ತು ಒತ್ತಾಸೆ ಮೇರೆಗೆ ಅನುದಾನ ಮಂಜೂರಿಸಿ ಕಾಮಗಾರಿ ಕೈಗೊಳ್ಳಲು ಮುಂದಾದರೆ ಸ್ಥಳೀಯ ಸರ್ಕಾರಗಳಿಂದ ಸಹಕಾರ ಅಲಭ್ಯವಾಗಿದೆ. ಕಾಮಗಾರಿ ಸ್ಥಳದಲ್ಲಿ ವಿದ್ಯುತ್ ಮಾರ್ಗಗಳು, ಬಿಎಸ್‌ಎನ್‌ಎಲ್ ಕೇಬಲ್‌ಗಳು, ನೀರು ಸರಬರಾಜು ಪೈಪ್‌ಲೈನ್‌ಗಳು, ಒಳಚರಂಡಿ ವ್ಯವಸ್ಥೆ ಹಾಗೂ ಇತರೆ ಭೂಗತ ಉಪಯುಕ್ತತಾ ಸ್ಥಳಾಂತರ ಕಾಮಗಾರಿಗಳನ್ನು ಸ್ಥಳೀಯ ಸರ್ಕಾರ ನಿರ್ವಹಿಸಬೇಕಾಗಿದೆ. ಅದಕ್ಕಾಗಿ 8 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರದಿಂದ ಉಪಯುಕ್ತತಾ ಸ್ಥಳಾಂತರ ಕಾಮಗಾರಿಗಳಿಗೆ ಅಗತ್ಯವಿರುವ ನಿಧಿಯ ಅನುಮೋದನೆ ಇನ್ನೂ ಬಾಕಿ ಇದ್ದು, ಕೂಡಲೇ ಅನುದಾನ ಮಂಜೂರಿಸಬೇಕು. ಇಲ್ಲವಾದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣದಂಥ ಮಹತ್ತರ ಯೋಜನೆಗೆ ಹಿನ್ನಡೆಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.