ಸಚಿವ ಎಂ.ಬಿ. ಪಾಟೀಲ ಜಿಲ್ಲಾ ಪ್ರವಾಸ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಆ. 29ಮತ್ತು 30 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಆ. 29ಮತ್ತು 30 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
Published on

ವಿಜಯಪುರ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಆ. 29ಮತ್ತು 30 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಆ. 29ರಂದು ಬೆಳಗ್ಗೆ 10 ರಿಂದ 12 ಗಂಟೆವರೆಗೆ ಬಿ.ಎಂ. ಪಾಟೀಲ ರಸ್ತೆಯಲ್ಲಿರುವ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸುವರು. ಸಂಜೆ 5 ಗಂಟೆಗೆ ಬಬಲೇಶ್ವರ ಗುರುಪಾದೇಶ್ವರ ಬೃಹನ್ಮಠದಲ್ಲಿ ಹಮ್ಮಿಕೊಂಡ ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184 ನೇ ಮಹಾಗಣಾರಾಧನೆ, ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳವರ ವಜ್ರಮಹೋತ್ಸವ ಮತ್ತು ಉತ್ತರಾಽಕಾರಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಅವರ ಪಟ್ಟಾಽಕಾರ ನಿಮಿತ್ತ ತಿರಂಗಾ ಬುತ್ತಿ ಯಾತ್ರೆಯಲ್ಲಿ ಭಾಗವಹಿಸಿ, ನಂತರ ಬೃಹನ್ಮಠಕ್ಕೆ ಸಚಿವರು ಭೇಟಿ ನೀಡುವರು.
ಆ. 30ರಂದು ಮಧ್ಯಾಹ್ನ 12 ಗಂಟೆಗೆ ಸಿಂದಗಿ ಬೈಪಾಸ್ ಹತ್ತಿರ ಗುತ್ತಿಗೆದಾರರ ಸಂಘದ ಭವನದ ಕಟ್ಟಡ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ನಗರದ ಅಥಣಿ ಮುಖ್ಯರಸ್ತೆಯಿಂದ ರಾಜಕುಮಾರ ಲೇಔಟ್ ಕೂಡು ರಸ್ತೆ 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವರು.
ಬಳಿಕ ತೊರವಿ ನವರಸಪುರ-ತಾಜಪುರ ಕೂಡು ರಸ್ತೆ 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಹಾಗೂ ನಗರದ ರಹಮಾನಿಯ ವೃತ್ತದಿಂದ ಕನ್ನಾನ -Àಂಕ್ಷನಹಾಲ್ ಹಾಗೂ ಬಾರಾಕೋಟ್ರಿ ತಾಂಡಾ ಮೂಲಕ ಜುಮನಾಳ, ಖತಿಜಾಪುರ ಕೂಡು ರಸ್ತೆ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಿz್ದÁರೆ.
ಆ. 31 ರಂದು ಸಚಿವರು ವಿಜಯಪುರದಲ್ಲಿದ್ದು, ಸೆ. 1 ರಂದು ಸಂಜೆ ಬೆಂಗಳೂರಿಗೆ ತೆರಳಲಿz್ದÁರೆ ಎಂದು ಸಚಿವರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
**
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net