ಸಚಿವ ಎಂ.ಬಿ. ಪಾಟೀಲ ತಿಕೋಟಾ ತಾಲೂಕಿನ ಸಿz್ದÁಪುರ ಬಳಿಯ ಮಾನೆನದೊಡ್ಡಿಯಲ್ಲಿ ನಡೆಯುತ್ತಿರುವ ಮರಿಗೆಮ್ಮ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವಿಯ ದರ್ಶನ ಪಡೆದರು. ಅಶೋಕ ದಳವಾಯಿ, ನಿಂಗು ಬೆಳ್ಳಬ್ಬಿ ಮತ್ತಿತರರಿದ್ದಾರೆ.
ವಿಜಯಪುರ: ತಿಕೋಟಾ ತಾಲೂಕಿನ ಸಿz್ದÁಪುರ ಬಳಿಯ ಮಾನೆನದೊಡ್ಡಿಯಲ್ಲಿ ನಡೆಯುತ್ತಿರುವ ಮರಿಗೆಮ್ಮ ಜಾತ್ರಾ ಮಹೋತ್ಸವ ಸ್ಥಳಕ್ಕೆ ಮಂಗಳವಾರ ಜಿ¯್ಲÁ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿ, ದೇವಿಯ ದರ್ಶನಾರ್ಶಿವಾದ ಪಡೆದುಕೊಂಡರು.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ದೇವರ ದರ್ಶನ ಪಡೆದದ್ದು ಮನಸ್ಸಿಗೆ ಸಂತಸ ತರಿಸಿದೆ. ಗ್ರಾಮಕ್ಕೆ ಸಮೀಪದ ಹಳ್ಳಕ್ಕೆ ನೀರು ಹರಿಸುವುದು, ಗ್ರಾಮದಲ್ಲಿ ಶಾಲೆ, ವಸತಿ ನಿಲಯ ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು.
ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮುಖಂಡರಾದ ಚನ್ನಪ್ಪ ದಳವಾಯಿ, ಅಶೋಕ ದಳವಾಯಿ, ನಿಂಗು ಬೆಳ್ಳಬ್ಬಿ, ಪೀರಪಟೇಲ ಪಾಟೀಲ, ರಂಗಾ ಸರಕಾರಿ, ಧನಂಜಯ ಮಾನೆ, ರಾಘು ಸುಳ್ಳವಸ್ತಿ ಮತ್ತಿತರರಿದ್ದಾರೆ.