

ಪ್ರಮುಖ ಮುಖ್ಯಾಂಶಗಳು
ಲೋಕೋಪಯೋಗಿ ಇಲಾಖೆಯ ರೂ. 10 ಕೋಟಿ ಅನುದಾನದಲ್ಲಿ ಸಾರವಾಡ - ಬಬಲೇಶ್ವರ ರಸ್ತೆಯ ಹಲಗಣಿ ಕ್ರಾಸ್‌ವರೆಗೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯ ರೂ. 2 ಕೋಟಿ ಅನುದಾನದಲ್ಲಿ ಸಾರವಾಡ ತೊನಶ್ಯಾಳ ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ರೂ. 5 ಕೋಟಿ ಅನುದಾನದಲ್ಲಿ ಸಾರವಾಡ - ದದಾಮಟ್ಟಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.ರೂ.2 ಕೋಟಿ ವೆಚ್ಚದ ಡೋಣಿ ನದಿಯಲ್ಲಿರುವ ಹೂಳೆತ್ತುವ ಕಾರ್ಯಕ್ಕೆ ಚಾಲನೆ, ರೂ. 1 ಕೋಟಿ ವೆಚ್ಚದಲ್ಲಿ ಚಿಕ್ಕಪ್ಪಯ್ಯ ಗುಡಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ, ಎಂಪಿಎಸ್ ಶಾಲೆಯಲ್ಲಿ ಮಕ್ಕಳ ಆಟಿಕೆ ಸಾಧನಗಳ ಉದ್ಘಾಟನೆ ನೆರವೇರಿಸಲಾಯಿತು.