ಎಂ.ಬಿ. ಪಾಟೀಲ ಕ್ಷೀರಕ್ರಾಂತಿಗೆ ದಾಪು

ಕ್ಷೀರ ಪೈಲಟ್ ಯೋಜನೆ ಅಳವಡಿಸಿಕೊಂಡು ಹೈನೋದ್ಯಮದಲ್ಲಿ ಯಶಸ್ವಿಯಾಗಿರುವ ನಾಗರಾಳ ಗ್ರಾಮದ ಸಾಹೇಬಗೌಡ ಪಾಟೀಲ ದಂಪತಿ ಹಾಲು ಕರೆಯುತ್ತಿರುವುದು.
ಕ್ಷೀರ ಪೈಲಟ್ ಯೋಜನೆ ಅಳವಡಿಸಿಕೊಂಡು ಹೈನೋದ್ಯಮದಲ್ಲಿ ಯಶಸ್ವಿಯಾಗಿರುವ ನಾಗರಾಳ ಗ್ರಾಮದ ಸಾಹೇಬಗೌಡ ಪಾಟೀಲ ದಂಪತಿ ಹಾಲು ಕರೆಯುತ್ತಿರುವುದು.
Published on
ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಜಲಕ್ರಾಂತಿಗೈಯುವ ಮೂಲಕ ಆಧುನಿಕ ಭಗೀರಥ ಎಂದೇ ಬಿರುದು ಪಡೆದುಕೊಂಡಿರುವ ಸಚಿವ ಎಂ.ಬಿ. ಪಾಟೀಲರು ಸದ್ಯ, ಕ್ಷೀರಕ್ರಾಂತಿ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ರೈತರಿಗೆ ನೀಡಿಸಿದ ತರಬೇತಿಯು -Àಲಪ್ರದವಾಗಿದೆ.
ಬಿಎಲ್‌ಡಿಇ ಸಂಸ್ಥೆ, ಅಕ್ಷಯಕಲ್ಪ ಹಾಗೂ ಕೃಷಿ ಕಲ್ಪ -Ëಂಡೇಷನ್ ಸಹಯೋಗದಲ್ಲಿ ಅನುಷ್ಠಾನಕ್ಕೆ ತರಲಾದ ಕ್ಷೀರ ಪೈಲಟ್ ಯೋಜನೆಯು ಯಶಸ್ವಿಯಾಗಿದೆ. ಅಲ್ಲದೆ, ವೈಜ್ಞಾನಿಕವಾಗಿ ಹೈನುಗಾರಿಕೆ ಪದ್ದತಿ ಅಳವಡಿಸಿಕೊಂಡಿರುವುದು ರೈತರ ಕೈಹಿಡಿದಿದ್ದು, ದುಪ್ಪಟ್ಟು ಆದಾಯ ಪಡೆಯುವಂತಾಗಿದೆ.
ಬಬಲೇಶ್ವರ ಹಾಗೂ ತಿಕೋಟಾ ತಾಲೂಕು ವ್ಯಾಪ್ತಿಯ ನಾಗರಾಳ, ಕುಮಠೆ, ಬಾಬಾನಗರ, ನಿಡೋಣಿ, ಜಾಲಗೇರಿ, ಡೋಕಳೆವಾಡಿ ಹಾಗೂ ಅರ್ಜುಣಗಿ ಗ್ರಾಮದಲ್ಲಿ 150 ರೈತರಿಗೆ ಉಚಿತ ತರಬೇತಿ ನೀಡುವ ಮೂಲಕ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.
ರೈತರನ್ನು ಸಾಂಪ್ರದಾಯಿಕ ಹೈನುಗಾರಿಕೆಯಿಂದ ವೈe್ಞÁನಿಕ ವಿಧಾನದ ಮೂಲಕ ಅತೀ ಕಡಿಮೆ ಮೇವು ನೀಡಿ, ಆಕಳುಗಳನ್ನು ಒಂದೇ ಕಡೆ ಕಟ್ಟಿ ಹಾಕದೇ ಸ್ವತಂತ್ರವಾಗಿ ಬಿಡುವ ಮೂಲಕ ಡೈರಿ -Áರ್ಮಿಂಗ್‌ನಲ್ಲಿ ರೈತರನ್ನು ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ.
ಎಚ್-ï ತಳಿಯ ಜರ್ಸಿ ಆಕಳುಗಳಿಗೆ ಹಸಿ ಮೇವು, ಒಣ ಮೇವು, ಉಪ್ಪು, ಮೆಕ್ಕೆಜೋಳ ನುಚ್ಚು, ಬೆಲ್ಲ ಸೇರಿಸಿ ದಿನಕ್ಕೆ ಕೇವಲ ಒಂದೇ ಬಾರಿ ಮೇವು ನೀಡಲಾಗುತ್ತಿದೆ. ಅದರಿಂದ ರೈತರ ಖರ್ಚು ಕೂಡ ಕಡಿಮೆಯಾಗಿದೆ. ಇನ್ನು ಹೈನೋದ್ಯಮದಲ್ಲಿ ಅಳವಡಿಸಿಕೊಳ್ಳಲಾದ ವೈe್ಞÁನಿಕ ಕ್ರಮದಿಂದಾಗಿ ಹಾಲು ಉತ್ಪಾದನೆಯೂ ಸಹ ದ್ವಿಗುಣವಾಗಿದೆ.
ಇನ್ನು ಆಕಳುಗಳು ಬೆಳಗ್ಗೆ 10 ಲೀ. ಹಾಗೂ ಸಂಜೆ 8 ಲೀ. ಗಳಷ್ಟು ಹಾಲು ಕೊಡುತ್ತಿದ್ದು, 3.7 ಹಾಗೂ 3.8ರಷ್ಟು -Á್ಯಟ್ ದೊರೆಯುತ್ತಿದೆ. ಹೀಗಾಗಿ, ರೈತರಿಗೆ ಹಾಲನ್ನು ಖಾಸಗಿ ಡೈರಿಯವರು ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಿz್ದÁರೆ.
ನಾಗರಾಳ ಗ್ರಾಮದ ರೈತ ಸಾಹೇಬಗೌಡ ಪಾಟೀಲ ಕುಟುಂಬ, ರಾಜಕುಮಾರ-ಮಹಾದೇವಿ ಕೊಣ್ಣೂರ ದಂಪತಿ, ಕುಮಠೆ ಗ್ರಾಮದ ಪ್ರಶಾಂತ ಸಂಗಪ್ಪ ಗಾಣಿಗೇರ ಸೇರಿ ಮೊದಲಾದ ರೈತರು ಈಗ ಖುಷಿಯಿಂದ ಸಂಪೂರ್ಣವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿz್ದÁರೆ.
ನಾಗರಾಳದ ಸಾಹೇಬಗೌಡ ಪಾಟೀಲರು 6 ಆಕಳುಗಳನ್ನು ಸಾಕಿದ್ದು, ಡೈರಿ -Áರ್ಮಿಂಗ್ ಯೋಜನೆಯ ತರಬೇತಿ ಲಾಭ ಪಡೆದುಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಹೈನೋದ್ಯಮ ಬೆಳೆಸುತ್ತಿz್ದÁರೆ. ನಿತ್ಯ 35 ಲೀ. ಹಾಲು ಉತ್ಪಾದನೆ ಮಾಡಿ, ತಿಂಗಳಿಗೆ ಸುಮಾರು 65 ಸಾವಿರ ರೂ. ಲಾಭ ಪಡೆಯುತ್ತಿz್ದÁರೆ.
ಅದೇ ಗ್ರಾಮದ ರಾಜಕುಮಾರ-ಮಹಾದೇವಿ ಕೊಣ್ಣೂರ ದಂಪತಿ ಕೇವಲ 2 ಎಕರೆ ಜಮೀನಿನಲ್ಲಿ ಹೈನೋದ್ಯಮ ಆರಂಭಿಸಿದ್ದರು. ಆರು ವರ್ಷದ ಹಿಂದೆ ಕೇವಲ ಒಂದು ಆಕಳು ಹೊಂದಿದ್ದರು. ಸದ್ಯ 13 ಆಕಳುಗಳ ಸಾಕುತ್ತಿz್ದÁರೆ. ಈ ಮೊದಲು ದಿನಕ್ಕೆ ಮೂರು ಸಲ ಮೇವು ಹಾಕಿದರೂ ಹೆಚ್ಚಿನ ಹಾಲು ಸಿಗುತ್ತಿರಲಿಲ್ಲ. ಆದರೆ, ಕ್ರಮ ಬದ್ಧವಾಗಿ ಒಂದೇ ಸಲ ಮೇವು ಹಾಕಲಾಗುತ್ತಿದೆ. ನಿತ್ಯ ನೂರು ಲೀ. ಹಾಲು ಬರುತ್ತಿದೆ. ಜತೆಗೆ ಕೋಳಿ, ಮೀನು ಸಾಕಾಣಿಕೆ ಮಾಡುತ್ತಿರುವುದರಿಂದ ಕೈ ತುಂಬಾ ಆದಾಯ ಬರುತ್ತಿದೆ ಎಂದು ಕೊಣ್ಣೂರ ದಂಪತಿ ಮಂದಹಾಸ ಬೀರಿದರು.
ಕುಮಠೆ ಗ್ರಾಮದ ರೈತ ಪ್ರಶಾಂತ ಸಂಗಪ್ಪ ಗಾಣಿಗೇರ 16 ಆಕಳುಗಳನ್ನು ಸಾಕಿದ್ದು, ನಿತ್ಯ 110 ಲೀ. ಹಾಲನ್ನು ಡೈರಿಗೆ ಕಳುಹಿಸುತ್ತಿz್ದÁರೆ. ಈ ಮೂಲಕ ತಿಂಗಳಿಗೆ 1.20 ಲಕ್ಷ ರೂ.ಗಳಿಂದ 1.80 ಲಕ್ಷ ರೂ.ವರೆಗೆ ಭರ್ಜರಿ ಆದಾಯ ಪಡೆಯುತ್ತಿz್ದÁರೆ. ಈಗಿರುವ ಆಕಳುಗಳ ಸಂಖ್ಯೆಯನ್ನು 35ಕ್ಕೆ ಹೆಚ್ಚಿಸುವ ಅಭಿಲಾಷೆ ಸಂಗಪ್ಪ ಹೊಂದಿರುವುದಾಗಿ ತಿಳಿಸಿದರು.
ಕ್ಷೀರ ಪೈಲಟ್ ಯೋಜನೆಗೆ ಬಿಎಲ್‌ಇಡಿ ಸಂಸ್ಥೆಯು ಪ್ರತಿ ವರ್ಷ 50 ಲಕ್ಷ ರೂ. ಅನುದಾನ ಕಲ್ಪಿಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net