ಸಾಹಿತ್ಯ, ಸ್ವಾತಂತ್ರ‍್ಯಕ್ಕೆ ಜೀವನ ಮುಡಿಪಾಗಿಟ್ಟಿದ್ದ ಮಂಜಪ್ಪ

ಡಾ. ಮಲ್ಲಿಕಾರ್ಜುನ ಮೇತ್ರಿ
ಡಾ. ಮಲ್ಲಿಕಾರ್ಜುನ ಮೇತ್ರಿ
Published on
ವಿಜಯಪುರ : ಹಣೆಯಲ್ಲಿ ವಿಭೂತಿ, ಮೈಮೇಲೆ ಶ್ವೇತ ವಸöಗಳನ್ನು ಧರಿಸಿದ ಮಂಜಪ್ಪ ತಮ್ಮ ಬದುಕನ್ನು ಸಾಹಿತ್ಯ, ಸ್ವಾತಂತ್ರ‍್ಯ ಹಾಗೂ ರಾಷ್ಟ್ರೀಯತೆಗಾಗಿ ಮುಡಿಪಾಗಿಟ್ಟವರು ಎಂದು ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ನಗರದ ಡಾ. ಫ.ಗು ಹಳಕಟ್ಟಿ ಸಂಶೋಧನ ಕೇಂದ್ರ ಹಾಗೂ ಸಾಂಸ್ಕೃತಿಕ-ಚಿಂತನ ಬಳಗದಿಂದ ಇತ್ತೀಚೆಗೆ ಹಮ್ಮಿಕೊಂಡ ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರು ವಿಷಯದ ಕುರಿತ ಅನುಭಾವಿಗಳು ಮರುಭೆಟ್ಟಿ (11) ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಹರ್ಡೇಕರ ಮಂಜಪ್ಪನವರು ಗಾಂಧಿಜಿಯವರಿಗೆ ಬಸವಣ್ಣನವರ ಬಗ್ಗೆ ಪರಿಚಯಿಸಿದ್ದಲ್ಲದೆ ಮರಾಠಿ, ಹಿಂದಿಯಲ್ಲಿ ಬಸವ ಚರಿತೆ ಕೃತಿಗಳನ್ನು ರಚಿಸಿ ರಾಷ್ಟçಮಟ್ಟದಲ್ಲಿ ಬಸವಣ್ಣನವರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ದೇವದಾಸಿ ಕುಟುಂಬದಲ್ಲಿ ಜನಿಸಿ, ಹಸಿವು ಮತ್ತು ಬಡತನದ ವಿರುದ್ಧ ಸೆಣಸಿ, ಅಕ್ಷರ ಜ್ಞಾನ ಪಡೆದು ಕರ್ನಾಟಕದ ಮುತ್ಸದ್ಧಿ ನಾಯಕರಾಗಿ ಜನರ ಮನಸ್ಸನ್ನು ಸೂರೆಗೊಂಡವರು ಎಂದರು.
ಮAಜಪ್ಪನವರ ನಿಸ್ವಾರ್ಥ, ತ್ಯಾಗಮಯವಾದ ಬದುಕು ಇಂದಿನ ಯುವಕರಿಗೆ ಮಾದರಿಯಾಗಿದೆ. 1913ರಲ್ಲಿ ಮೊದಲ ಬಸವ ಜಯಂತಿ ಆಚರಣೆ ಮಾಡಿಸಿದ ಶ್ರೇಯಸ್ಸು ಮಂಜಪ್ಪನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಕಾರ್ಯಕ್ರದಲ್ಲಿ ಇತ್ತೀಚೆಗೆ ಅಗಲಿದ ಬಸವ ಸಂಸ್ಕೃತಿಯ ಆರಾಧಕ, ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿ.ಆರ್. ಬನಸೋಡೆ ಪ್ರಾರ್ಥಿಸಿದರು. ಡಾ. ಎಂ.ಎಸ್. ಮದಭಾವಿ ಸ್ವಾಗತಿಸಿದರು. ಸುಭಾಸ ಕನ್ನೂರ ನಿರೂಪಿಸಿದರು. ಡಾ. ವಿ.ಡಿ. ಐಹೊಳ್ಳಿ ವಂದಿಸಿದರು.
ಡಾ. ಆರ್.ಕೆ. ಕುಲಕರ್ಣಿ, ಜಿ.ಆರ್. ಕುಲಕರ್ಣಿ, ಗಂಗಾಧರ ಸಾಲಕ್ಕಿ, ಕೆ.ಎಸ್. ಬಿರಾದಾರ, ಸುಭಾಸ ಯಾದವಾಡ, ಡಾ. ವಿ.ಎಸ್. ಬಾಗಾಯತ, ಸಂಗಪ್ಪ ಶಿವಣಗಿ, ಎಸ್.ಬಿ. ದೊಡಮನಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net