ತಾಲೂಕು ಪಂಚಾಯಿತಿಯ ನೂತನ ಸಹಾಯಕ ನಿರ್ದೇಶಕ (ಪ್ರಭಾರ) ಮಲ್ಲಿಕಾರ್ಜುನ ಕೋರಿ ಅವರು ಮಂಗಳವಾರ ಅಽಕಾರ ಸ್ವೀಕರಿಸಿದರು. ತಾಪಂ ಮ್ಯಾನೇಜರ್ ಡಿ.ಬಿ.ಮುಲ್ಲಾ, ಎನ್.ಆರ್.ಜಿ ತಾಂತ್ರಿಕ ಸಂಯೋಜಕ ಶಂಕರಗೌಡ ಬಿರಾದಾರ, ವಿ.ಆರ್.ಡಬ್ಲು.ಎಸ್.ಕೆ ಘಾಟಗೆ ಇದ್ದರು.
Published on:
Copied
Follow Us
ಮುದ್ದೇಬಿಹಾಳ: ತಾಲೂಕು ಪಂಚಾಯಿತಿಯ ನೂತನ ಸಹಾಯಕ ನಿರ್ದೇಶಕ (ಪ್ರಭಾರ) ಮಲ್ಲಿಕಾರ್ಜುನ ಕೋರಿ ಅವರು ಮಂಗಳವಾರ ಅಽಕಾರ ಸ್ವೀಕರಿಸಿದರು.
ಬಿದರಕುಂದಿ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ (ಪಿಡಿಒ) ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಕೋರಿ ಅವರು ಈಗ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರ ಹೊಣೆಗಾರಿಕೆ ವಹಿಸಿಕೊಂಡ ಹಿನ್ನೆಲೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ನೂತನ ಅಽಕಾರಿಯಾಗಿ ಅಽಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಕೋರಿ ಅವರನ್ನು ತಾಲೂಕು ಪಂಚಾಯತಿ (ಪಂಚಾಯತಿ ರಾಜ್ಯ) ಸಹಾಯಕ ನಿರ್ದೇಶಕ ಅವರಿಗೆ ಬಿದರಕುಂದಿ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.
ತಾಪಂ ಮ್ಯಾನೇಜರ್ ಡಿ.ಬಿ.ಮುಲ್ಲಾ, ಎನ್.ಅರ್.ಜಿ ತಾಂತ್ರಿಕ ಸಂಯೋಜಕ ಶಂಕರಗೌಡ ಬಿರಾದಾರ, ವಿ.ಆರ್.ಡಬ್ಲು.ಎಸ್.ಕೆ ಘಾಟಗೆ, ಮೌಲಾಸಾಬ ಬನ್ನಟ್ಟಿ, ಅಬ್ದುಲ್ ರಜಾಕ್ ದೊಡಮನಿ, ಮಡಿವಾಳಯ್ಯ ಹಿರೇಮಠ, ತಾಪಂ ಸಿಬ್ಬಂದಿ ಹಾಗೂ ಬಿದರಕುಂದಿ ಗ್ರಾಮ ಪಂಚಾಯತಿ ಸಿಬ್ಬಂದಿ ಮತ್ತಿತರರಿದ್ದರು.