ಜಾತ್ರೆಯಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ

ವಿಜಯಪುರ ನಗರ ಹೊರವಲಯದ ತೊರವಿಯಲ್ಲಿ ನಡೆಯುತ್ತಿರುವ ಜಾನುವಾರ ಜಾತ್ರಾ ಸ್ಥಳಕ್ಕೆ ಜಿಲ್ಲಾಽಕಾರಿ ಡಾ. ಆನಂದ ಕೆ. ಭೇಟಿ ನೀಡಿ ಪರಿಶೀಲಿಸಿದರು. ಅಽಕಾರಿಗಳಾದ ಅಲ್ಲಾಭಕ್ಷ ಬಿಜಾಪುರ, ಅಶೋಕ ಗೋಣಸಗಿ ಇದ್ದಾರೆ.
ವಿಜಯಪುರ ನಗರ ಹೊರವಲಯದ ತೊರವಿಯಲ್ಲಿ ನಡೆಯುತ್ತಿರುವ ಜಾನುವಾರ ಜಾತ್ರಾ ಸ್ಥಳಕ್ಕೆ ಜಿಲ್ಲಾಽಕಾರಿ ಡಾ. ಆನಂದ ಕೆ. ಭೇಟಿ ನೀಡಿ ಪರಿಶೀಲಿಸಿದರು. ಅಽಕಾರಿಗಳಾದ ಅಲ್ಲಾಭಕ್ಷ ಬಿಜಾಪುರ, ಅಶೋಕ ಗೋಣಸಗಿ ಇದ್ದಾರೆ.
Published on
ವಿಜಯಪುರ: ಸಂಕ್ರಮಣದ ಸಿದ್ಧೇಶ್ವರ ಜಾತ್ರೆ ನಿಮಿತ್ತ ತೊರವಿಯಲ್ಲಿ ಜ. ೧೦ ರಿಂದ ನಡೆಯುತ್ತಿರುವ ಜಾನುವಾರ ಜಾತ್ರಾ ಸ್ಥಳಕ್ಕೆ ಬುಧವಾರ ಜಿಲ್ಲಾಽಕಾರಿ ಡಾ.ಆನಂದ ಕೆ. ಭೇಟಿ ನೀಡಿ ಪರಿಶೀಲಿಸಿದರು.
ಜಾತ್ರೆಯಲ್ಲಿ ಅಗತ್ಯ ಸೌಲಭ್ಯ, ಜಾತ್ರೆಗೆ ಆಗಮಿಸುವ ಸುಗಮ ರಸ್ತೆ, ಸಾರಿಗೆ ವ್ಯವಸ್ಥೆ, ಜಾನುವಾರುಗಳಿಗೆ ಕುಡಿಯುವ ನೀರು, ಪಶುವೈದ್ಯಾಽಕಾರಿಗಳು, ಮುಂಜಾಗ್ರತವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಅಲ್ಲದೆ, ಆಂಬುಲೆನ್ಸ್, ವೈದ್ಯಕೀಯ ಸೌಲಭ್ಯ ಸೇರಿ ಜಾನುವಾರು ಜಾತ್ರೆಯಲ್ಲಿ ಯಾವುದೇ ಕೊರತೆ ಉಂಟಾಗದAತೆ ನೋಡಿಕೊಳ್ಳಬೇಕೆಂದು ಅಽಕಾರಿಗಳಿಗೆ ಸೂಚಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ಈ ಬಾರಿ ಜಾತ್ರೆಗೆ ಅಂದಾಜು ಐದು ಸಾವಿರ ಜಾನುವಾರುಗಳು ಆಗಮಿಸಿದ್ದು, ಅವುಗಳ ಪೈಕಿ ಈವರೆಗೆ ೧೫೦೦ ಜಾನುವಾರು ಮಾರಾಟವಾಗಿವೆ ಎಂದರು.
ಪಶುಸAಗೋಪನಾ ಇಲಾಖೆ ಉಪ ನಿರ್ದೇಶಕ ಅಶೋಕ ಗೋಣಸಗಿ ಮತ್ತಿತರರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net