ಮಧುರಚೆನ್ನರು ಜನಮಾನಸದ ಕವಿ

ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ನಡೆದ ಮಧುರಚೆನ್ನರ ೧೨೩ನೇ ಜಯಂತಿಯನ್ನು ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಉದ್ಘಾಟಿಸಿದರು. ಸಾಹಿತಿ ಸಿ.ಎಂ. ಬಂಡಗಾರ,  ಬಿ.ಆರ್. ಬನಸೋಡೆ, ಸಂತೋಷ ಭೋವಿ ಇತರರಿದ್ದಾರೆ.
ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ನಡೆದ ಮಧುರಚೆನ್ನರ ೧೨೩ನೇ ಜಯಂತಿಯನ್ನು ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಉದ್ಘಾಟಿಸಿದರು. ಸಾಹಿತಿ ಸಿ.ಎಂ. ಬಂಡಗಾರ, ಬಿ.ಆರ್. ಬನಸೋಡೆ, ಸಂತೋಷ ಭೋವಿ ಇತರರಿದ್ದಾರೆ.
Published on

ವಿಜಯಪುರ:

`ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಕವಿ ಮಧುರಚೆನ್ನರು ಜನಮಾನಸದಲ್ಲಿ ಶಾಶ್ವತವಾಗಿ ಉಳಿದ ದಾರ್ಶನಿಕರು. ಭೀಮೆಯ ತಟದಲ್ಲಿ ಹುಟ್ಟಿ ಬೆಳೆದ ಅವರು ತಮ್ಮ ಕಾವ್ಯದ ಮೂಲಕ ನಮ್ಮ ನೆಲದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ' ಎಂದು ಸಾಹಿತಿ ಸಿ.ಎಂ. ಬಂಡಗಾರ ಹೇಳಿದರು.

ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಹಾಗೂ ಮೋರಟಗಿ ಕಲ್ಪವೃಕ್ಷ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಧುರಚೆನ್ನರ ೧೨೩ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
`ನಿಸರ್ಗದೊಂದಿಗೆ ಕಾವ್ಯದ ಲೇಪನ ಮಾಡಿ ಜಾಗತಿಕ ಆಧ್ಯಾತ್ಮಿಕ ಸಾಹಿತ್ಯಲೋಕದಲ್ಲಿ ಮಧುರಚೆನ್ನರು ವಿಶಿಷ್ಟ ಹೆಸರನ್ನು ಗಳಿಸಿದ್ದು, ಹಲಸಂಗಿಯನ್ನು ನವೋದಯ ಕಾವ್ಯದ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ' ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಪವೃಕ್ಷ ಕಾಲೇಜಿನ ಪ್ರಾಂಶುಪಾಲ ಎ.ಬಿ. ಸಿಂದಗಿ ಮಾತನಾಡಿ, `ಮಧುರಚೆನ್ನರ ಸಾಹಿತ್ಯ ಮತ್ತು ಚಿಂತನೆಯ ಮೇಲೆ ಅರವಿಂದರ ಪ್ರಭಾವ ಸಾಕಷ್ಟಿತ್ತು. ಅನುಭಾವದ ನೆಲೆಯಲ್ಲಿ ಅವರು ಸೃಷ್ಟಿಸಿದ ವಿಶಿಷ್ಟ ಸಾಹಿತ್ಯ ಕನ್ನಡಕ್ಕೆ ಅಮೂಲ್ಯ ಕೊಡುಗೆಯಾಗಿದ್ದು, ಅವರ ಸಾಹಿತ್ಯ ಪರಂಪರೆ ಸದಾ ಅವಿಸ್ಮರಣೀಯವಾಗಿರಲಿದೆ' ಎಂದು ತಿಳಿಸಿದರು.
ಮಧುರಚೆನ್ನರ ಕುಟುಂಬ ಸದಸ್ಯರಾದ ಜಗದೀಶ ಗಲಗಲಿ ಹಾಗೂ ಮಹಾದೇವಿ ಗಲಗಲಿ ಮಾತನಾಡಿ, ಕವಿಯ ಬದುಕು, ಸಾಹಿತ್ಯ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಸ್ಮರಿಸಿದರು.

ಸAಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಉದ್ಘಾಟಿಸಿದರು.

ಪ್ರತಿಷ್ಠಾನದ ಸದಸ್ಯರಾದ ಪುಲಕೇಶಿ ಪುರುಷೋತ್ತಮ ಗಲಗಲಿ ಹಾಗೂ ದಾಕ್ಷಾಯಣಿ ಬಿರಾದಾರ, ಇಲಾಖೆಯ ಸಿಬ್ಬಂದಿ ಅಯ್ಯುಬ್ ದ್ರಾಕ್ಸಿ, ಅಂಜನಾ ಇಜೇರಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು. ಸದಸ್ಯ ಡಾ. ರಮೇಶ ಕತ್ತಿ ವಂದಿಸಿದರು. ಪ್ರೊ. ಜಿ.ಎಂ. ಪಾಟೀಲ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಲಾವಿದ ಭೀಮು ಕಟ್ಟಿಮನಿ ಸಂಗಡಿಗರಿAದ ಸಂಗೀತ ಕಾರ್ಯಕ್ರಮ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net