ಸಮಾಜದಲ್ಲಿ ಸಾಮರಸ್ಯದಿಂದ ಬದುಕಿ

ಇಂಡಿಯ ಅಗರಖೇಡ ರಸ್ತೆಯಲ್ಲಿ ಶರಣ ಹೂಗಾರ ಮಾದಯ್ಯ ವೃತ್ತ ಲೋಕಾರ್ಪಣೆಗೊಳಿಸಿದ ಶಾಸಕ ಯಶವಂತರಾಯಗೌಡ ಪಾಟೀಲರನ್ನು ಹೂಗಾರ ಸಮುದಾಯ ಬಾಂಧವರು ಸತ್ಕರಿಸಿದರು.
ಇಂಡಿಯ ಅಗರಖೇಡ ರಸ್ತೆಯಲ್ಲಿ ಶರಣ ಹೂಗಾರ ಮಾದಯ್ಯ ವೃತ್ತ ಲೋಕಾರ್ಪಣೆಗೊಳಿಸಿದ ಶಾಸಕ ಯಶವಂತರಾಯಗೌಡ ಪಾಟೀಲರನ್ನು ಹೂಗಾರ ಸಮುದಾಯ ಬಾಂಧವರು ಸತ್ಕರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯಶವಂತರಾಯಗೌಡ ಪಾಟೀಲ
  • ಶರಣ ಹೂಗಾರ ಮಾದಯ್ಯ
  • ವೃತ್ತ ಲೋಕಾರ್ಪಣೆ
  • ಕಾರ್ಯಕ್ರಮ
ಇಂಡಿ: ಜ್ಞಾನದ ಪರಿಮಳ ಸೂಸುವ ಮೂಲಕ ಬಸವಾದಿ ಪ್ರಥಮರಲ್ಲಿ ಕಾಯಕ ದೊಡ್ಡದು ಎಂದು ಸಾರಿದವರು ಶರಣ ಹೂಗಾರ ಮಾದಯ್ಯನವರು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ನಗರದ ಅಗರಖೇಡ ರಸ್ತೆಯಲ್ಲಿ ನಿರ್ಮಿಸಿರುವ ಶರಣ ಹೂಗಾರ ಮಾದಯ್ಯನವರ ವೃತ್ತವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರಿಗೆ ಅನುಯಾಯಿಯಾಗಿ ಶರಣರಿಗೆ ಹೂವು ಪೂರೈಸುವ ಕಾಯಕ ಕೈಗೊಂಡು ಕಾಯಕದಲ್ಲಿ ಭಕ್ತಿ ಕಂಡುಕೊಂಡಿದ್ದರು. ಸತಿ-ಪತಿಗಳು ವಚನ ಚಳವಳಿಯಲ್ಲಿ ಸಕ್ರೀಯರಾಗಿ ಶಿವಪೂಜೆ ಮತ್ತು ಲಿಂಗಪೂಜೆಗೆ ಹೂ ಕಾಯಕ ಮಾಡುತ್ತಿದ್ದರು. ಅಂತಹ ಸಮಾಜದಲ್ಲಿ ಜನಿಸಿದ ನೀವೆಲ್ಲರೂ ಧನ್ಯರು. ಭಕ್ತಿ ಭಾವದಿಂದ ಅವರ ಮಾರ್ಗದರ್ಶನದಲ್ಲಿ ನಾವು ಸಾಗೋಣ ಎಂದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಹೂವು ಪೋಣಿಸಿದ ದಾರದಂತೆ ಬಾಳಬೇಕು. ಸಹನೆ, ತಾಳ್ಮೆ ಎಲ್ಲರಲ್ಲೂ ಇರಬೇಕು ಎಂದು ಸಾರಿದವರು ಹೂಗಾರ ಮಾದಯ್ಯನವರು ಎಂದರು. ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿದರು.
ಪ್ರಭುಗೌಡ ಪಾಟೀಲ, ಪ್ರಶಾಂತ ಹೂಗಾರ, ಸಿದ್ದು ಹೂಗಾರ, ಜಟ್ಟೆಪ್ಪ ರವಳಿ, ದೇವೇಂದ್ರ ಕುಂಬಾರ, ಮಹೇಶ ಹೂಗಾರ, ಸೋಮು ಹೂಗಾರ, ಗಂಗಾಧರ ಹೂಗಾರ, ಪ್ರಕಾಶ ಹೂಗಾರ, ಇಲಿಯಾಸ ಬೋರಾಮಣಿ, ಶ್ರೀಕಾಂತ ಕೂಡಿಗನೂರ, ನಿಂಗಪ್ಪ ಹೂಗಾರ, ಬಾಳು ಮುಳಜಿ, ವಿಜುಗೌಡ ಪಾಟೀಲ, ಜಗದೀಶ ಕುಂಬಾರ, ಮಂಜು ದೇವರ, ಸಂಜು ದಾದಾ ರಾಠೋಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net