ಗ್ರಂಥಾಲಯ ಕೇವಲ ಜ್ಞಾನದ ಉಗ್ರಾಣಗಳಲ್ಲ

ವಿಜಯಪುರದ ವಚನ ಪಿತಾಮಹ ಡಾ.ಪಿ.ಜಿ.ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರಯ ಉದ್ಘಾಟಿಸಿದರು. ಡಾ.ಮಂಜುನಾಥ ಪಿ, ಡಾ. ಲೀನಾ ರಾಘ, ಡಾ. ಎಂ.ಎಂ. ಬಾಚಲಾಪುರ ಮತ್ತಿತರರಿದ್ದಾರೆ.

Published on
ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕೇಂದ್ರ ಗ್ರಂಥಾಲಯದಲ್ಲಿ ಮುಕ್ತ ಮೂಲ ಸಾಪ್ಟ್ ವೇರ್ ಗ್ರಂಥಾಲಯ ನಿರ್ವಹಣೆಯನ್ನು ಅನ್ವೇಷಿಸುವುದು' ಎಂಬ ವಿಷಯದ ಕುರಿತು ಮೂರು ದಿನಗಳ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ಅಧ್ಯಕ್ಷ ಡಾ. ಸುರೇಶ ಡಿ.ಎಸ್., ಗ್ರಂಥಾಲಯಗಳ ಬದಲಾಗುತ್ತಿರುವ ಪಾತ್ರದ ಕುರಿತು ಮಾತನಾಡಿ, ಗ್ರಂಥಾಲಯಗಳು ಕೇವಲ ಜ್ಞಾನದ ಉಗ್ರಾಣಗಳಲ್ಲ. ಸದ್ಯ ಈಗ, ಅವುಗಳನ್ನು ಡಿಜಿಟಲ್ ಜ್ಞಾನ ಕೇಂದ್ರಗಳಾಗಿ ಪರಿವರ್ತಿಸುವುದು ಮತ್ತು ಬಳಕೆದಾರರಿಗೆ ಇಲೆಕ್ಟ್ರಾನಿಕ್ ಸೇವೆಗಳನ್ನು ಒದಗಿಸುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಮಂಜುನಾಥ ಪಿ. ಮಾತನಾಡಿ, ಗ್ರಂಥಾಲಯ ಸೇವೆಗಳು ಪುಸ್ತಕಗಳು ಮತ್ತು ಇ-ಜರ್ನಲ್‌ಗಳು ಸೇರಿ ವ್ಯಾಪಕವಾದ ಮುದ್ರಣ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಶೈಕ್ಷಣಿಕ ಬೆಳವಣಿಗೆಗೆ ಬೆಂಬಲ ನೀಡುತ್ತವೆ ಎಂದು ತಿಳಿಸಿದರು.
ಉಪ ಪ್ರಾಚಾರ್ಯೆ ಡಾ.ಲೀನಾ ರಾಘ, ಡಾ. ಪ್ರದೀಪ ಮಾಳಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದ ಸಂಚಾಲಕ ಎಂ.ಎಂ. ಬಾಚಲಾಪುರ ಸ್ವಾಗತಿಸಿ, ಕಾರ್ಯಾಗಾರ ಮತ್ತು ತಾಂತ್ರಿಕ ಅಧಿವೇಶನದ ಅವಲೋಕನ ಮಾಡಿದರು. ಶಶಿಕಾಂತ ಚೋಳಕೆ ಪರಿಚಯಿಸಿದರು. ಕೈಲಾಶ ಚಡಚಣ ನಿರೂಪಿಸಿದರು. ವಿದ್ಯಾ ಬೂದಿಹಾಳ ವಂದಿಸಿದರು.
ಕಾರ್ಯಾಗಾರದಲ್ಲಿ ಶಿವಮೊಗ್ಗದ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಗ್ರಂಥಪಾಲಕ ನಿರಂಜನ ಕೆ. ಮತ್ತು ಡಾ. ಬಸವರಾಜ್ ಕುಂಬಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ವಿಜಯಪುರದ ವಚನ ಪಿತಾಮಹ ಡಾ.ಪಿ.ಜಿ.ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರಯ ಉದ್ಘಾಟಿಸಿದರು. ಡಾ.ಮಂಜುನಾಥ ಪಿ, ಡಾ. ಲೀನಾ ರಾಘ, ಡಾ. ಎಂ.ಎಂ. ಬಾಚಲಾಪುರ ಮತ್ತಿತರರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net