2013-18ರ ಅವಧಿಯಲ್ಲಿ ತುಬಚಿ ಬಬಲೇಶ್ವರ ಯೋಜನೆಗೆ ಈ ಭಾಗದ ಅತಿ ಎತ್ತರದ ಪ್ರದೇಶವಾದ ಕನಮಡಿ, ಬಾಬಾನಗರ, ಬಿಜ್ಜರಗಿ, ತಿಕೋಟಾ ತಾಲೂಕು ಹಾಗೂ ಸಾವಳಗಿ ತಾಲೂಕಿನ 1.30 ಲಕ್ಷ ಎಕರೆ ಅಂದಾಜು 6.3 ಟಿಎಂಸಿ ನೀರಿನಲ್ಲಿ 5.5 ತಿಕೋಟಾ ಹೋಬಳಿಗೆ ಮತ್ತು ಸಾವಳಿ ತಾಲೂಕಿಗೆ 0.8 ಟಿಎಂಸಿ ನೀರೋದಗಿಸಲು 3600 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈಗಾಗಲೇ, ಅಂತರಜಲಮಟ್ಟ ಹೆಚ್ಚಾಗಿ ಆ ಭಾಗದ ರೈತರು ಸಂತಸದಲ್ಲಿದ್ದಾರೆ. ಎ-ïಐಸಿ ಯೋಜನೆ ಪೂರ್ಣಗೊಂಡು ಕೆರೆಗಳಿಗೆ ನೀರು ಒದಗಿಸಲಾಗುತ್ತಿದೆ. ಟೆಂಡರ್ ಆಗಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ರೈತರ ಹೊಲಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.