ಸಂಧಾನದ ಮೂಲಕ ಸಮಾಧಾನ ಕಂಡುಕೊಳ್ಳಲಿ

ಮುದ್ದೇಬಿಹಾಳ ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಯಿತು. ನ್ಯಾಯಾಧಿಶ ಸಚಿನ್ ಕೌಶಿಕ್, ರವೀಂದ್ರಕುಮಾರ ಕಟ್ಟಿಮನಿ, ರವೀಂದ್ರಕುಮಾರ ಕಟ್ಟಿಮನಿ ಮತ್ತಿತರರಿದ್ದರು.
ಮುದ್ದೇಬಿಹಾಳ ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಯಿತು. ನ್ಯಾಯಾಧಿಶ ಸಚಿನ್ ಕೌಶಿಕ್, ರವೀಂದ್ರಕುಮಾರ ಕಟ್ಟಿಮನಿ, ರವೀಂದ್ರಕುಮಾರ ಕಟ್ಟಿಮನಿ ಮತ್ತಿತರರಿದ್ದರು.
Published on
ಮುದ್ದೇಬಿಹಾಳ: ಪಕ್ಷಗಾರರ ಕಾನೂನು ಹೋರಾಟಕ್ಕೆ ಕೇವಲ ಒಂದೇ ದಿನದಲ್ಲಿ ಸುಖಾಂತ್ಯ ಹಾಡಲು ಲೋಕ್ ಅದಾಲತ್ ಪ್ರತೀ 3 ತಿಂಗಳಿಗೊಮ್ಮೆ ಸಿದ್ಧವಿರುತ್ತೆ.
ಸಂಧಾನದ ಮೂಲಕ ಸಮಾಧಾನ ಕಂಡುಕೊಳ್ಳುವುದೇ ನಿಜವಾದ ಜಯ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಸಚಿನ್ ಕೌಶಿಕ್ ಅಭಿಪ್ರಾಯ ಪಟ್ಟರು.
ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಲೋಕ್ ಅದಾಲತ್‌ನಲ್ಲಿ ಅವರು ಮಾತನಾಡಿದರು.
ನಿಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಬಗೆಹರಿಸಿಕೊಳ್ಳಲು ನಿಮ್ಮ ವಕೀಲರಿಗೆ ಅಥವಾ ತಾಲೂಕು ಕಾನೂನು ಸೇವಾ ಸಮಿತಿಯನ್ನು ಭೇಟಿ ಮಾಡಬಹುದು ಎಂದರು.
ಅದಾಲತ್‌ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂದಿಸಿದಂತೆ ಒಟ್ಟು 7110 ಬಾಕಿ ಇರುವ ಪ್ರಕರಣಗಳಲ್ಲಿ 1828 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.
ಇವುಗಳಲ್ಲಿ ಅಪರಾಧ, ಎಂವಿಸಿ, ಚೆಕ್ ಬೌನ್ಸ್, ಮೆಂಟೇನೆನ್ಸ್, ಪಾಲು ವಾಟ್ನಿ ದಾವೆಗಳು, ಎಲ್.ಎ.ಸಿ ಇಪಿ, ಎಮ್.ವಿ.ಸಿ ಇ.ಪಿ, ಅಪರಾಧ ದಂಡ ಪ್ರಕರಣಗಳ ಪೈಕಿ ಒಟ್ಟು 839 ಪ್ರಕರಣ ಹಾಗೂ ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್, ಬಿಎಸ್‌ಎನ್‌ಎಲ್, ಬ್ಯಾಂಕಿನ ಪ್ರಕರಣಗಳು ಹೀಗೆ ಒಟ್ಟು 1002 ಪ್ರಕರಣಗಳಲ್ಲಿ 294 ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧಿಶ ಸಚಿನ್ ಕೌಶಿಕ್, ಹಿರಿಯ ಸಿವಿಲ್ ನ್ಯಾಯಧಿಶ ರವೀಂದ್ರಕುಮಾರ ಕಟ್ಟಿಮನಿ, ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಽÃಶ ರಾಮಮೂರ್ತಿ ಎನ್. ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ನ್ಯಾಯಾಂಗ ಸಂಧಾನಕಾರರಾಗಿ ರವಿ ನಾಲತವಾಡ, ಎಚ್.ಜಿ.ನಾಗೋಡ, ಎಮ್.ಆರ್. ಮುಜಾವರ ವಕೀಲರು ಭಾಗಿಯಾದರೆ, ಅಪರ ಸರ್ಕಾರಿ ವಕೀಲ ಎಚ್.ಎಲ್. ಸರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ್ ಶಶಿಕಾಂತ ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ವ್ಹಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಸ್.ಆರ್.ಸಜ್ಜನ, ಏನ್.ಜಿ.ಕುಲಕರ್ಣಿ, ಎನ್.ಆರ್.ಮೊಕಾಶಿ, ಎಂ.ಆರ್.ಪಾಟೀಲ, ಎಂ.ಎಚ್.ಕ್ವಾರಿ, ನ್ಯಾಯವಾದಿಗಳಾದ ಚೇತನ ಶಿವಶಿಂಪಿ, ಬಿ.ಎಂ.ಮುಂದಿನಮನಿ, ಆಯ್.ಎಸ್.ಹಗಟಗಿ. ಎಲ್.ಆರ್.ನಾಲತವಾಡ, ಎಸ್.ಎಂ.ಕಿಣಗಿ, ಎಲ್.ಎಸ್.ಮೇಟಿ, ಸಾಬಣ್ಣ ಚಳ್ಳಗಿ ಸೇರಿ ಲೋಕ್ ಅದಾಲತ್ ಯಶಸ್ವಿಗೆ ಶ್ರಮಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net